Saturday, June 20, 2026
spot_imgspot_img
spot_imgspot_img

ಬಹರೈನ್ ಪ್ರಧಾನಮಂತ್ರಿ ವಿಯೋಗಕ್ಕೆ ಕೆ.ಸಿ.ಎಫ್ ಬಹರೈನ್ ತೀವ್ರ ಸಂತಾಪ.

- Advertisement -
- Advertisement -

ಮನಾಮ : ಬಹರೈನ್ ಪ್ರಧಾನ ಮಂತ್ರಿ ಶೈಖ್ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫಾರವರ ವಿಯೋಗಕ್ಕೆ ಕೆ.ಸಿ.ಎಫ್ ಬಹರೈನ್ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.


ಜಗತ್ತಿನಲ್ಲೇ ಅತ್ಯಂತ ಹೆಚ್ಚು ಕಾಲ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದವರಾಗಿದ್ದಾರೆ ಖಲೀಫಾ ಬಿನ್ ಸಲ್ಮಾನ್. ಆಧುನಿಕ ಬಹರೈನಿನ ಅಭಿವೃದ್ಧಿಗಾಗಿ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ ಖಲೀಫಾರವರು ಪ್ರವಾಸಿಗಳ ಕುರಿತು ಹೆಚ್ಚಿನ ಅನುಕಂಪವನ್ನು ಹೊಂದಿದ್ದರು.ಅವರ ಮಗ್ಫಿರತ್ ಹಾಗೂ ಮರ್ಹಮತಿಗಾಗಿ ಕೆ.ಸಿ.ಎಫ್ ನ ಎಲ್ಲಾ ಕಾರ್ಯಕರ್ತರು ದುವಾ ಮಾಡಬೇಕೆಂದು ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಹಾಗೂ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿಯವರು ಪತ್ರಿಕಾ ಪ್ರಕಟಣೆ ಯೊಂದರಲ್ಲಿ ತಿಳಿಸಿದ್ದಾರೆ.


ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ನೇತಾರರಾದ ಬಹು| ಅಲಿ ಮುಸ್ಲಿಯಾರ್ ಹಾಗೂ ಬಶೀರ್ ಕಾರ್ಲೆ ರವರು ಖಲೀಫಾ ರವರ ವಿಯೋಗಕ್ಕೆ ತೀವ್ರ ಸಂತಾಪ ಸೂಚಿಸಿ ಅವರ ಅಗಲುವಿಕೆಯಿಂದ ಅನಿವಾಸಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!