Friday, July 24, 2026
spot_imgspot_img
spot_imgspot_img

ಪ್ರಾಕ್ಟೀಸ್ ವೇಳೆ ಚೆಂಡು ಬಡಿದು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಗಂಭೀರ ಗಾಯ – ಆಸ್ಪತ್ರೆಗೆ ರವಾನೆ

- Advertisement -
- Advertisement -

ನವದೆಹಲಿ: ಅರುಣ್ ಜೇಟ್ಲಿಯಲ್ಲಿ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್ ಸಾಹಿಲ್ ಪರಾಕ್ ಪ್ರಾಕ್ಟೀಸ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂದ್ಯಾವಳಿ ಹಿನ್ನೆಲೆ ಶುಕ್ರವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಬಡಿದು ಸಾಹಿಲ್ ಪರಾಕ್ ತೀವ್ರ ಗಾಯಗೊಂಡಿದ್ದಾರೆ. ಮೈದಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ ಅಂಬುಲೆನ್ಸ್ ಅನ್ನು ನೇರವಾಗಿ ಕ್ರೀಡಾಂಗಣಕ್ಕೆ ಕರೆಸಿಕೊಂಡು ಸಾಹಿಲ್ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾಹಿಲ್ ಅವರ ಗಾಯದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಸಾಹಿಲ್ ಮೈದಾನದಲ್ಲಿ ಗಾಯಗೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ಪಂದ್ಯ ಆಡಿದ್ದು, 3ರಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋಲು ಕಂಡು 6 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

- Advertisement -

Related news

error: Content is protected !!