Thursday, March 28, 2024
spot_imgspot_img
spot_imgspot_img

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬೌಲಿಂಗ್‍ಗೆ ಶರಣಾದ ಚೆನ್ನೈ ಸೂಪರ್​ ಕಿಂಗ್ಸ್​..!

- Advertisement -G L Acharya panikkar
- Advertisement -

ದುಬೈ: ಐಪಿಎಲ್ ಇಂದು ಡೆಲ್ಲಿ ಕ್ಯಾಪಿಟಲ್ ತಂಡದ  ಬೌಲಿಂಗ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ  ಎರಡನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ತಂಡ 44 ರನ್‍ಗಳ ಅಂತರದಲ್ಲಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.

ಡೆಲ್ಲಿ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.

ಡೆಲ್ಲಿ ತಂಡದ ಬೌಲಿಂಗ್‍ನಲ್ಲಿ  ಅಕ್ಷರ್ ಪಟೇಲ್ ಪಟೇಲ್ ನಾಲ್ಕು ಓವರ್ ನಲ್ಲಿ 18 ರನ್ ಕೊಟ್ಟು 1 ವಿಕೆಟ್ ಪಡೆದರೆ, ಅನ್ರಿಚ್ ನಾಟ್ರ್ಜೆ  4 ಓವರ್ ಬೌಲ್ ಮಾಡಿ 2 ವಿಕೆಟ್ ಕಿತ್ತು , ರಬಡಾ ನಾಲ್ಕು ಓವರ್ ಎಸೆದು ಮೂರು ವಿಕೆಟ್ ಕಿತ್ತು 26 ರನ್ ನೀಡಿದರು.

- Advertisement -

Related news

error: Content is protected !!