Friday, April 19, 2024
spot_imgspot_img
spot_imgspot_img

ಸಖತ್ ಸದ್ದು ಮಾಡುತ್ತಿದೆ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಧರ್ಮದೈವ ಕಿರುಚಿತ್ರ

- Advertisement -G L Acharya panikkar
- Advertisement -

ಅದ್ಭುತ ಎನಿಸುವಂತ ದೃಶ್ಯ ಸಂಯೋಜನೆ, ಮನ ಮೆಚ್ಚುವ ಚಿತ್ರಕಥೆ, ಕಲಾತ್ಮಕ ಸಂಕಲನ ಹಾಗೂ ಚಿತ್ರತಂಡ ಅವಿರತ ಪ್ರಯತ್ನದ ಫಲ ಧರ್ಮದೈವ ತುಳು ಕಿರುಚಿತ್ರ. ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಕಿರುಚಿತ್ರ ಧರ್ಮದೈವ ಈಗಾಗಲೇ ಯೂಟ್ಯೂಬ್‌ನಲ್ಲಿ ತೆರೆ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ. ಸೋನು ಕ್ರೀಯೆಶನ್ಸ್ ನಲ್ಲಿ ಮೂಡಿಬಂದ ಈ ಕಿರುಚಿತ್ರ ಈಗಾಗಲೇ ಯೂಟ್ಯೂಬ್‌ನಲ್ಲಿ 24 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿರುಚಿತ್ರದ ಪ್ರೀಮಿಯಾರ್ ಶೋ ಪ್ರದರ್ಶನ ಮೂಡಬಿದ್ರೆ ಕುವೆಂಪು ಸಭಾಂಗಣದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಮ್ ಮೋಹನ್ ಆಳ್ವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ವಹಣೆ ಕೌಶಿಕ್ ರೈ ಕುಂಜಾಡಿ, ನಿತೇಶ್ ದೋಲ್ತೋಡಿ, ನಿರ್ಮಾಣ ಸುಧಾಕರ್ ಪಡೀಲ್, ಹರೀಶ್ ಪುತ್ತೂರು ಛಾಯಗ್ರಹಣ, ರಾಧೇಶ್ ರೈ ಮೊಡಪ್ಪಾಡಿ ಸಂಕಲನ ಹಾಗೂ ಧ್ವನಿಗ್ರಹಣ, ಗ್ರಾಫಿಕ್ಸ್ ಧನು ರೈ, ನಿತಿನ್ ಕಾನಾವು, ಸ್ಥಿರ ಚಿತ್ರ ಪ್ರಣವ್ ಭಟ್, ಪ್ರಸಾದನ ಪ್ರೇಮ್ ಆರ್ಲಪದವು, ಸಂಭಾಷಣೆ, ಹಮೀದ್ ಪುತ್ತೂರು, ನಾರಾಯಣ ರೈ ಕುಕ್ಕುವಳ್ಳಿ, ಹಿನ್ನಲೆ ಧ್ವನಿ ಭಾಸ್ಕರ್ ರೈ ಕುಕ್ಕುವಳ್ಳಿ, ಅಶ್ವಿನಿ ಪೆರುವಾಯಿ ನೀಡಿದ್ದಾರೆ.

ಈ ಕಿರುಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲೈಕ್ಸ್, ಕಮೆಂಟ್ಸ್ ಬಂದಿದ್ದು, ನಿರ್ದೇಶಕರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಟಾಕೀಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಿರುಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಿ. https://www.youtube.com/watch?v=QXT8j7wr3NY

- Advertisement -

Related news

error: Content is protected !!