



ಬೆಂಗಳೂರು: ವೃದ್ಧೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ ವಂಚಕರು ಬರೋಬ್ಬರಿ 38 ಲಕ್ಷ ಆರ್‌ಟಿಜಿಎಸ್ ಮಾಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾ.11ರಂದು ಆರಂಭದಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಮುಂಬೈ ಬ್ರಾಂಚ್‌ನಲ್ಲಿ ನಿಮ್ಮ ಹೆಸರಲ್ಲಿ ಅಕೌಂಟ್ ಓಪನ್ ಮಾಡಲಾಗಿದೆ. ಮುಂಬೈ ಬ್ರಾಂಚ್ ಅಕೌಂಟ್‌ನಿಂದ ಭಯೋತ್ಪಾದಕರಿಗೆ ಹಣಕಾಸಿನ ನೆರವು ಕಳುಹಿಸುತ್ತಿದ್ದೀರಿ ಎಂದು ವೃದ್ಧೆಯನ್ನ ಬೆದರಿಸಿ, ತನಿಖೆಯ ಭಾಗವಾಗಿ ಆರ್‌ಬಿಐ ಪರಿಶೀಲನೆ ಮಾಡುತ್ತದೆ. 38 ಲಕ್ಷ ನಗದು ಹಾಕಿ ಬಳಿಕ ಒಂದು ಗಂಟೆಯ ಒಳಗಾಗಿ ನಿಮ್ಮ ಹಣ ಮರಳಿ ಕಳುಹಿಸಲಾಗುತ್ತದೆ ಎಂದು ನಂಬಿಸಿದ್ದಾರೆ.
ವೃದ್ಧೆ ಗೀತಾ ತನ್ನ ಬಳಿ ಇದ್ದ 38 ಲಕ್ಷ ಹಣ ವರ್ಗಾವಣೆ ಮಾಡಿದ್ದು, 72 ಗಂಟೆಗಳ ಕಾಲ ಯಾರನ್ನು ಕೂಡ ಸಂಪರ್ಕ ಮಾಡಬಾರದು ಎಂದು ಬೆದರಿಸಿದ್ದಾರೆ. ಎರಡು ದಿನಗಳಾದರೂ ಹಣ ಮರಳಿ ಬರದೆ ಇದ್ದಾಗ ಅನುಮಾನಗೊಂಡ ವೃದ್ಧೆ ಡಿಜಿಟಲ್ ಅರೆಸ್ಟ್ ಮಾಡಿ ಹಣ ಬೆದರಿಸಿ ಹಣ ಹಾಕಿಸಿಕೊಂಡಿದ್ದಾರೆಂದು ತಿಳಿದು ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








