Tuesday, September 10, 2024
spot_imgspot_img
spot_imgspot_img

*CORONA BLAST*:- ಕರಾವಳಿಯಲ್ಲಿ ಸೋಮವಾರವು ಶತಕ ದಾಟಿದ ಸೋಂಕು. ಇಂದು ಜಿಲ್ಲೆಯಲ್ಲಿ 131 ಜನರಿಗೆ ಪಾಸಿಟಿವ್.4 ಮಂದಿ ಸಾವು.! ರಾಜ್ಯದಲ್ಲಿ ಇಂದು 2738 ಕೊರೊನಾ ವೈರಸ್ ಪತ್ತೆ. ಸಿಲಿಕಾನ್ ಸಿಟಿಯಲ್ಲಿ 1315 ಮಂದಿಯಲ್ಲಿ ಸೊಂಕು ಪತ್ತೆ. ರಾಜ್ಯದಲ್ಲಿ ಇಂದು 73 ಮಂದಿ ಕೊರೊನಾಗೆ ಸಾವು.

- Advertisement -G L Acharya panikkar
- Advertisement -

ಮಂಗಳೂರು : ದ.ಕ ಜಿಲ್ಲೆಯಲ್ಲಿ ಇಂದು ದಾಖಲೆಯ ಕೊರೋನಾ ಮಹಾ ಸ್ಪೋಟ.!ಇಂದು  ಜಿಲ್ಲೆಯಲ್ಲಿ131 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ 16 ಮಂದಿ , ILI 63, SARI 10 ಪ್ರಕರಣ , ಸಂಪರ್ಕಕ್ಕೆ ಸಿಗದ 38 ಪ್ರಕರಣಗಳು, ಅಂತರಾಷ್ಟ್ರೀಯ ಪ್ರಯಾಣದಿಂದ 4 ಪ್ರಕರಣ ಪತ್ತೆ ಯಾಗಿದೆ . ಕಳೆದೊಂದು ವಾರದಿಂದ ಕೊರೋನಾಕ್ಕೆ ಸಾವನ್ನಪ್ಪುವವರ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಕೂಡ 4 ಜನ ಬಲಿ ಯಾಗಿದ್ದರೆ. ಕೊರೊನಾ ಸೋಂಕಿತರ ಸಂಖ್ಯೆ ದಿನಂಪ್ರತಿ ಏರಿಕೆಯಾಗುತ್ತಿದ್ದು, ಜಿಲ್ಲೆಯನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಬೆಂಗಳೂರು : ಕೊರೊನಾ ಮಹಾಮಾರಿಯ ಇಂದು ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 1315 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಬೆಂಗಳೂರಿನಲ್ಲಿ ಕೊರೊನಾ ಸೊಂಕಿಗೆ 47 ಮಂದಿ ಇಂದು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 2738 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 41581 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ ಬರೋಬ್ಬರಿ 73 ಮಂದಿ ಸಾವನ್ನಪ್ಪಿದಾರೆ.

- Advertisement -

Related news

error: Content is protected !!