Tuesday, June 9, 2026
spot_imgspot_img
spot_imgspot_img

ಸುರತ್ಕಲ್: ಮಹಿಳೆ ನಾಪತ್ತೆ, ಆತ್ಮಹತ್ಯೆಯ ಶಂಕೆ

- Advertisement -
- Advertisement -

ಸುರತ್ಕಲ್: ಸೂರಿಂಜೆ ಬಳಿಯ ಪುಚ್ಚಾಡಿಯ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಾಪತ್ತೆಯಾದ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (೪೦) ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಯ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಸೋಮವಾರ ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದು, ಇವರು ಮುಂಬಯಿ0ದ ಆಗಮಿಸಿದ್ದರು.

ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆಯಿ0ದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿದ್ದು ಮಳೆಯ ಅಬ್ಬರಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಿರುವ ಪರಿಣಾಮ ಶೋಧ ನಡೆಸಲು ಅಡ್ಡಿಯಾಗಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!