Monday, September 28, 2026
spot_imgspot_img
spot_imgspot_img

ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ಸಚಿವ ಅಂಗಾರರನ್ನು ಭೇಟಿಯಾದ ಮೀನುಗಾರರ ನಿಯೋಗ

- Advertisement -
- Advertisement -

ಮಂಗಳೂರು: ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ರಾಜ್ಯ ಸರಕಾರ ಗಣನೆಗೆ ತೆಗೆದುಕೊಂಡು ಶೀಘ್ರವಾಗಿ ಪರಿಹರಿಸಬೇಕೆಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಮೀನುಗಾರ ಮುಖಂಡರ ನಿಯೋಗ ಶುಕ್ರವಾರ ಸಕ್ಯೂರ್ಟ್ ಹೌಸಿನಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿರುವ ಶ್ರೀ ಅಂಗಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಈ ಕುರಿತು ಶಾಸಕರಾದ ಡಾ.ಭರತ್ ಶೆಟ್ಟಿಯವರು ಸಚಿವರಿಗೆ ಮೀನುಗಾರ ಬಂಧುಗಳ ಮುಖ್ಯ ಸಮಸ್ಯೆಯಾದ ಮೀನುಗಾರಿಕೆಗೆ ಸೀಮೆಎಣ್ಣೆ ಸರಿಯಾಗಿ ಸಿಗದ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ತಾವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರಾದ ಅಂಗಾರ ಅವರು ಭರವಸೆ ನೀಡಿದರು.

ನಿಯೋಗದಲ್ಲಿ ಮಹಾನಗರ ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದಅಧ್ಯಕ್ಷರಾದ ಅಶ್ವತ್ ಕಾಂಚನ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಶ್ರೀಯನ್ ಗುಡ್ಡೆಕೋಪ್ಲ, ಪ್ರಧಾನ ಕಾರ್ಯದರ್ಶಿ ಕಿಶೋರ್ ಮುಕ್ಕ, ಸಂಘದ ಮಾರ್ಗದರ್ಶಕರಾದ ಕೇಶವ ಪುತ್ರನ್, ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!