Thursday, April 25, 2024
spot_imgspot_img
spot_imgspot_img

ಪ್ರಖ್ಯಾತ ನಾಳೀಯ ಶಸ್ತ್ರಚಿಕಿತ್ಸಕ, ಡಾ ಎಂ.ವಿ.ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ರಾಮ್‌ಗೋಪಾಲ್ ಶೆಟ್ಟಿ ನಿಧನ

- Advertisement -G L Acharya panikkar
- Advertisement -

ಮಂಗಳೂರು : ಪ್ರಖ್ಯಾತ ನಾಳೀಯ ಶಸ್ತ್ರಚಿಕಿತ್ಸಕ ಮತ್ತು ಡಾ ಎಂ.ವಿ.ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ರಾಮ್‌ಗೋಪಾಲ್ ಶೆಟ್ಟಿ ಅವರು ಸೆಪ್ಟೆಂಬರ್ 14 ರ ಸೋಮವಾರ ನಿಧನರಾದರು.

75 ವರ್ಷ ಪ್ರಾಯದ ಅವರು, ಜೂನ್ 12, 1945 ರಂದು ಮಂಗಳೂರಿನಲ್ಲಿ ಜನಿಸಿದ ಡಾ. ಎಂ. ಆರ್. ಶೆಟ್ಟಿ ಅವರು, ಸೇಂಟ್ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ (ಕೆಎಂಸಿ) ಪದವಿ ಮತ್ತು ಸ್ನಾತಕೋತ್ತರ ವೃತ್ತಿಪರ ಶಿಕ್ಷಣವನ್ನು ಪಡೆದರು. ನಂತರ ಅವರು ನಾಳೀಯ ಶಸ್ತ್ರಚಿಕಿತ್ಸೆ ಫೆಲೋಶಿಪ್‌ಗಾಗಿ ಯುಕೆಗೆ ತೆರಳಿದ್ದು ಅಲ್ಲಿಂದ ವಾಪಾಸ್‌ ಬಂದ ಬಳಿಕ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಡಾ. ಶೆಟ್ಟಿ ಅವರು 1985 ರಲ್ಲಿ ಡಾ ಎಂ ವಿ ಮೆಮೋರಿಯಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದು ಅದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಟ್ರಸ್ಟ್ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಲ್ಲಿದ್ದು ಜನರಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. ಅವರು ಡಾ ಎಂ ಆರ್ ಶೆಟ್ಟಿ ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1979 ರಿಂದ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸಕರಾಗಿದ್ದರು. ಅಲ್ಲದೆ, ಅವರು ವಿಶ್ವವಿದ್ಯಾಲಯದ ಶಿಕ್ಷಣ ಕ್ಷೇತ್ರದಲ್ಲಿ ಅಕಾಡೆಮಿಕ್ ಕೌನ್ಸಿಲ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಹಾಗೂ 1982 ರಿಂದ ನಾಲ್ಕು ಅವಧಿಗೆ ಅದರ ಸದಸ್ಯರಾಗಿ ಆಯ್ಕೆಯಾದರು.

ಕರ್ನಾಟಕದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭೌತಚಿಕಿತ್ಸೆ, ಸ್ಪೀಚ್‌ ಆಡ್‌ ಹಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ಶಸ್ತ್ರಚಿಕಿತ್ಸೆಯ ವಿಶೇಷ ಘಟಕ ಬಾಹ್ಯ ನಾಳೀಯ ಶಸ್ತ್ರಚಿಕಿತ್ಸೆಯು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಡ ಜನರಿಗೆ ಕೈಗೆಟಕುವ ಸೇವೆ, ಆರೈಕೆಯನ್ನು ನೀಡಲಾಗುತ್ತಿದೆ. ಇನ್ನು ಅವರು ಭಾರತೀಯ ಪುನರ್ವಸತಿ ಮಂಡಳಿಯಲ್ಲಿ ಕಾರ್ಯನಿರ್ವಾಹಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾ. ಎಂ.ಆರ್. ಶೆಟ್ಟಿ ಒಬ್ಬ ದೂರದೃಷ್ಟಿ ಉಳ್ಳವರಾಗಿದ್ದು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ತರಬೇತಿಯನ್ನು ನೀಡಲು ಶ್ರಮಿಸಿದರು. ನಿರ್ಗತಿಕರನ್ನು ಗಮನದಲ್ಲಿಟ್ಟುಕೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಬ್ಲಡ್‌ ಬ್ಯಾಂಕ್ ಅನ್ನು ಸಹ ಪ್ರಾರಂಭಿಸಿದರು. ಪ್ಯಾರಮೆಡಿಕಲ್‌ ಸೈನ್ಸ್‌ಗಾಗಿ ಭಾರತದಲ್ಲಿ ಅವರು ನೀಡಿದ ಕೊಡುಗೆ ಮಹತ್ವದ್ದಾಗಿದೆ. ಅವರು ತೀವ್ರ ಕ್ರೀಡಾ ಉತ್ಸಾಹಿಯಾಗಿದ್ದರು. 1987 ರಲ್ಲಿ ಮಂಗಳೂರಿನಲ್ಲಿ ಮೊದಲ ಎಟಿಪಿ ಪಂದ್ಯಾವಳಿಯನ್ನು ನಡೆಸಿದರು. ಇದು ದೊಡ್ಡ ಯಶಸ್ಸನ್ನು ಕಂಡಿತು.

ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೆನಿಸ್ ಪಂದ್ಯಾವಳಿಗಳನ್ನು ನಡೆಸುವ ಜವಾಬ್ದಾರಿಯೂ ಅವರ ಮೇಲಿತ್ತು. ಡಾ. ಶೆಟ್ಟಿಯವರ ಪತ್ನಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕಿ ಪ್ರೊಫೆಸರ್ ಹಿಮಾ ಉರ್ಮಿಲಾ ಶೆಟ್ಟಿ ಅವರಾಗಿದ್ದು ಈ ದಂಪತಿಗಳು ಇಬ್ಬರು ಪುತ್ರಿಯರನ್ನು ಮೃತ ಡಾ. ಶೆಟ್ಟಿಯವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!