Sunday, April 28, 2024
spot_imgspot_img
spot_imgspot_img

ಸ್ಟಾರ್ ನಟಿ ಸಂಜನಾ ಗಲ್ರಾನಿ ವಿರುದ್ಧ ಮತ್ತೊಂದು ಆರೋಪ

- Advertisement -G L Acharya panikkar
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ ಕುರಿತು ಗಂಭೀರ ಆರೋಪ ಮಾಡಿರುವ ಪ್ರಶಾಂತ್ ಸಂಬರಗಿ ಇದೀಗ ಸ್ಟಾರ್ ನಟಿ ಸಂಜನಾ ಗಲ್ರಾನಿ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ‘ಸಂಜನಾ ಗಲ್ರಾನಿ 2018 ರಲ್ಲಿ ಮತಾಂತರಗೊಂಡಿದ್ದಾರೆ ಅಂತಾ ಅವರು ಹೇಳಿದ್ದಾರೆ.


ಎರಡು ವರ್ಷಗಳ ಹಿಂದೆ ಸಂಜನಾ ಮುಸ್ಲಿಂ ಮತಕ್ಕೆ ಮತಾಂತರಗೊಂಡಿದ್ದರು ಅನ್ನೋ ಮಾತು ಕೇಳಿಬರುತ್ತಿದೆ. ಎರಡು ವರ್ಷಗಳ ಹಿಂದೆ ಅಜೀಜ್ ಪಾಷಾ ಜೊತೆ ಸಂಜನಾ ಮದುವೆಯಾಗಿತ್ತು ಎಂದು ಎನ್ನಲಾಗಿತ್ತು.

ಎರಡು ವರ್ಷಗಳ ಹಿಂದೆ ಸಂಜನಾ ಮುಸ್ಲಿಂ ಮತಕ್ಕೆ ಮತಾಂತರಗೊಂಡಿದ್ದರು ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಬೆಂಗಳೂರಿನ ದಾರುಲ್ ಉಲೂಮ್ ಶಾ ವಲಿಯುಲ್ಲಾ ಎನ್ನುವ ಮದ್ರಸ ಸಂಜನಾ ಮತಾಂತರ ಆಗಿರುವ ಬಗ್ಗೆ 2018ರಲ್ಲಿ ತನ್ನ ಲೆಟರ್ ಹೆಡ್ ನಲ್ಲಿ ಬಿಡುಗಡೆ ಮಾಡಿದ್ದ ನೋಟೀಸ್ ಬಹಿರಂಗವಾಗಿದೆ.

ಅರ್ಚನಾ ಗಲ್ರಾನಿ(ಸಂಜನಾ ಒರಿಜಿನಲ್ ಹೆಸರು) ಇನ್ನು ಮಿಸ್ ಮಾಹಿರಾ ಎಂಬುದಾಗಿ ಹೆಸರು ಬದಲಿಸಿಕೊಂಡಿದ್ದಾರೆ. ಆಕೆಯ ಸ್ವ ಇಚ್ಛೆಯಿಂದ ಸಂಜನಾ ಮತಾಂತರ ಆಗಿರುವುದಾಗಿ ದಾರುಲ್ ಉಲೂಮ್ ಶಾ ವಲೀಯುಲ್ಲಾ ಮದ್ರಸದವರು, ಸಾರ್ವಜನಿಕರ ಗಮನಕ್ಕೆ ಎಂದು ನೋಟಿಸ್ ನೀಡಿದ್ದರು. ಈ ನೋಟಿಸ್ ಈಗ ಜಾಲತಾಣದಲ್ಲಿ ಓಡಾಡುತ್ತಿದ್ದು ಸಂಜನಾ ಮುಸ್ಲಿಂ ಆಗಿ ಮತಾಂತರ ಆಗಿದ್ದರೇ ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.

- Advertisement -

Related news

error: Content is protected !!