Monday, June 22, 2026
spot_imgspot_img
spot_imgspot_img

ವಿಟ್ಲ: ಅರ್ಥ್ ಮೂವರ್ಸ್ ಅಸೋಸಿಯೇಷನ್ ಪುತ್ತೂರು ವತಿಯಿಂದ ಹೊರ ಜಿಲ್ಲೆಯ ಜೆಸಿಬಿ ಹಠಾವೋ ಯಶಸ್ವಿ ಕಾರ್ಯಾಚರಣೆ

- Advertisement -
- Advertisement -

ವಿಟ್ಲ: ಪುಣಚ ಪರಿಸರದಲ್ಲಿ ಹೊರ ಜಿಲ್ಲೆಯ ಜೆಸಿಬಿ ಕೆಲಸ ಮಾಡುತ್ತಿರುವುದನ್ನು ಮನಗಂಡ ಅರ್ಥ್ ಮೂವರ್ಸ್ ಅಸೋಸಿಯೇಷನ್ ಪುತ್ತೂರು ನೇರವಾಗಿ ಪುಣಚ ಸೈಟಿಗೆ ದಾಳಿ ಮಾಡಿ ಅಲ್ಲಿಂದ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಬಿ ಕುದ್ದುಪದವಿಗೆ ಹೋದ ವಿಚಾರವಾಗಿ ಜೆಸಿಬಿ ಓನರ್ ಹಾಗೂ ಯೂನಿಯನ್ ಸದಸ್ಯರ ನಡುವೆ ಚಕಮಕಿ ನಡೆದಿದ್ದು, ಕೂಡಲೇ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದರು. ಈ ವೇಳೆ ತಕ್ಷಣ ಯೂನಿಯನ್ ಸದಸ್ಯರು ವಿಚಾರವನ್ನು ಪೋಲಿಸರೀಗೆ ತಿಳಿಸಿದರು. ನಂತರ ಎರಡೂ ಕಡೆಯವರನ್ನು ಪೊಲೀಸರು ವಿಟ್ಲ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

ಈ ವೇಳೆ ಹೊರ ಜಿಲ್ಲೆಯ ಗಣೇಶ್ ಎಂಬಾತನಲ್ಲಿ 3 ಮಿಷನ್ ಇದೇ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಈತನಿಗೆ ಒಂದೇ ಜೆಸಿಬಿಯ ಮೂಲಕ ಕೆಲಸ ಮಾಡುವಂತೆ ಸೂಚನೆ ನೀಡಲಾಯಿತು. ಅದಲ್ಲದೆ ಅದಲ್ಲದೇ ಆತನಿಗೆ 5 ದಿನಗಳ ಕಾಲಾವಕಾಶ ಹಾಗೂ ಯೂನಿಯನ್ ವ್ಯಾಪ್ತಿಯ ಏಜೆಂಟ್ ಮೂಲಕವೇ ಕೆಲಸ ಮಾಡ ಬೇಕು ಎಂಬುದಾಗಿ ಯೂನಿಯನ್ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಅರ್ಥ್ ಮೂವರ್ಸ್ ಅಸೋಸಿಯೇಷನ್ ಪುತ್ತೂರು ಯೂನಿಯನ್ ಅಧ್ಯಕ್ಷರು ಪದಾಧಿಕಾರಿಗಳು, ಪುತ್ತೂರು ಅರ್ಥ್ ಮೂವರ್ಸ್ ಅಸೋಸಿಯೇಷನ್ ತಾಲೂಕು ಯೂನಿಯನ್ ಮಾಜಿ ಅಧ್ಯಕ್ಷರು, ಪುತ್ತೂರು, ಕುಂಬ್ರ, ವಿಟ್ಲ ,ಉಪ್ಪಿನಂಗಡಿ ಭಾಗದ ಸದಸ್ಯರುಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!