Monday, July 27, 2026
spot_imgspot_img
spot_imgspot_img

‘ಏಕದಂತ’ ಆನೆ ಹೃದಯಾಘಾತದಿಂದ ಸಾವು

- Advertisement -
- Advertisement -

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ ಸಕ್ರೆಬೈಲು ಬಿಡಾರದಲ್ಲಿದ್ದ ‘ಏಕದಂತ’ ಆನೆ ಮಂಗಳವಾರ (ಅ.20) ಹೃದಯಾಘಾತದಿಂದ ಅಸುನೀಗಿದೆ.


ಏಕದಂತ ಆನೆಗೆ 35 ವರ್ಷ ವಯಸ್ಸಾಗಿದ್ದು, ಈ‌ ಆನೆಯನ್ನು ಎರಡು ವರ್ಷದ ಹಿಂದೆ ಹಾಸನದ ಸಕಲೇಶಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ಈ ಆನೆಗೆ ಒಂದೇ ದಂತವಿದ್ದ ಕಾರಣ ಇದಕ್ಕೆ ಏಕದಂತ ಎಂದು ನಾಮಕರಣ ಮಾಡಲಾಗಿತ್ತು.


ಕಳೆದ ಎರಡು‌ ದಿನಗಳಿಂದ ಈ ಆನೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಸಕ್ರೆಬೈಲಿನ ಪಶುವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ಹೃದಯಾಘಾತದಿಂದ ಆನೆ ಸಾವನ್ನಪ್ಪಿದೆ ಎಂದು ಸಕ್ರೆಬೈಲು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.


ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸದ್ಯಕ್ಕೆ ಸಕ್ರೆಬೈಲು ಬಿಡಾರದಲ್ಲಿ 23 ಆನೆಗಳು ಇರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!