Thursday, June 18, 2026
spot_imgspot_img
spot_imgspot_img

ಮಂಗಳೂರು : ಮಂದಿರದ ಬಳಿ ಬಿಜೆಪಿಯಿಂದ ಚುನಾವಣೆ ಪ್ರಚಾರ: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ

- Advertisement -
- Advertisement -

ಮಂಗಳೂರು : ಚುನಾವಣೆ ಪ್ರಚಾರ ನಡೆಸುವ ವಿಚಾರವಾಗಿ ಆರಂಭವಾದ ವಾಗ್ವಾದವು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಾಮಕಿ ಜೋರಾದ ಘಟನೆ ಇಂದು(ಗುರುವಾರ) ನಗರದ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ನಡೆದಿದೆ.

ದೇವಸ್ಥಾನದ ಬಳಿ ಬಿಜೆಪಿ ಕಾರ್ಯಕರ್ತರ ತಂಡವು ಚುನಾವಣಾ ಪ್ರಚಾರ ನಡೆಸುತ್ತಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಚಾರದ ವಿಚಾರವಾಗಿ ಆರಂಭವಾದ ವಾಗ್ವಾದವು, ಹೊಯ್ ಕೈ ನಡೆಸುವ ಹಂತಕ್ಕೆ ತಲುಪಿತು. ವಿಷಯ ತಿಳಿದ ಕೂಡಲೇ ಶಾಸಕ ವೇದವ್ಯಾಸ್‌ ಕಾಮತ್‌ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದ ಕಾಂಗ್ರೆಸ್ ಮುಖಂಡರು ಕೂಡ ಸ್ಥಳಕ್ಕೆ ಆಗಮಿಸಿದ್ದು, ವಾಗ್ವಾದವು ವಿಪರೀತಕ್ಕೆ ತಲುಪುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಈ ವೇಳೆ ಡಿಸಿಪಿ ಸಿದ್ಧಾರ್ಥ್ ಗೋಯಲ್, ಉರ್ವ ಇನ್ಸ್ ಪೆಕ್ಟರ್ ಭಾರತಿ ಸ್ಥಳಕ್ಕೆ ಬಂದು ಸೇರಿದ್ದ ಜನರನ್ನು ಚದುರಿಸುವ ಕೆಲಸ ಮಾಡಿದ್ದಾರೆ.

- Advertisement -

Related news

error: Content is protected !!