- Advertisement -
- Advertisement -
ಪ್ರಕರಣ ದಾಖಲು





ಬಂಟ್ವಾಳ: ಗ್ರಾಮಾಂತರ ಠಾಣಾನಲ್ಲಿ ಆ. 13 ರಂದು ಅ.ಕ್ರ. 68/2025 ನೇ ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಉಮ್ಮರ್ ಫಾರೂಕ್ ಎಂಬವರು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ನೀಡಿದ ದೂರನ್ನು ತನಿಖೆ ನಡೆಸಲಾಗಿತ್ತು. ಇದೊಂದು ಸುಳ್ಳು ದೂರಾಗಿರುವುದರಿಂದ ಉಮ್ಮರ್ ಫಾರೂಕ್ ಈತನ ಮೇಲೆ ದಿನಾಂಕ 26-08-2025 ರಂದು ಠಾಣಾ ಅಕ್ರ 128/2025 ಕಲಂ 192,353(1)(ಬಿ),230(1),248(ಎ) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಈ ವಿಚಾರ ದಿನಾಂಕ: 28.08.2025 ರಂದು ಸಾಮಾಜಿಕ ಜಾಲ ತಾಣವಾದ ಫೇಸ್ಬುಕ್ ನ ಅಶ್ರಪ್ ತಲಪಾಡಿ ಎಂಬ ಪೇಜ್ ನಲ್ಲಿ ಕಾನೂನು ಬಧ್ದವಾದ ಆಧಾರಗಳು ಇಲ್ಲವೆಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸುಳ್ಳು ಅಪಾಧನೆ ಮಾಡಿದ ಅಶ್ರಪ್ ಎಂಬುವರಿಗೆ ನೋಟಿಸ್ ಜಾರಿ ಮಾಡಿ ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 130/2025 ಕಲಂ 353(1)(B)(2),192 BNS ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








