Sunday, June 14, 2026
spot_imgspot_img
spot_imgspot_img

ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣು..!

- Advertisement -
- Advertisement -

ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಹುಣಸೂರು ತಾಲೂಕಿನ ತಿಪ್ಪಲಾಪುರ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಕರಿಗೌಡ (53) ಎಂದು ಗುರುತಿಸಲಾಗಿದೆ.

ಕ್ರಿಮಿನಾಶಕ ಕಾಳು ಸೇವಿಸಿ ರೈತ ಕರಿಗೌಡ ಆತ್ಮಹತ್ಯೆಗೆ ಶರಣಾಗಿದ್ದಾನೆ. 2.5 ಎಕರೆ ಜಮೀನು ಹೊಂದಿದ್ದ ಕರಿಗೌಡ ತಂಬಾಕು ಮತ್ತಿತರ ಬೆಳೆ ಬೆಳೆದಿದ್ದರು. ಕೊತ್ತೆಗಾಲ ಕರ್ನಾಟಕ ಬ್ಯಾಂಕ್ ನಲ್ಲಿ 2 ಲಕ್ಷ ಹಾಗೂ ಗ್ರಾಮದಲ್ಲಿ 2 ಲಕ್ಷದಷ್ಟು ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈಹತ್ತದೆ, ಸಾಲ ತೀರಿಸಲಾಗದೆ ಕ್ರಿಮಿನಾಶಕದ ಮಾತ್ರೆ ಸೇವಿಸಿ ಅಸ್ಪಸ್ಥ ಆಗಿದ್ದರು.

ಕರಿಗೌಡನನ್ನು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕರಿಗೌಡ ಸಾವನ್ನಪ್ಪಿದ್ದಾನೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!