Thursday, July 23, 2026
spot_imgspot_img
spot_imgspot_img

ಇಂಡಿಗೋ ವಿಮಾನದೊಳಗೆ ವಿದ್ಯುತ್‌ ವ್ಯತ್ಯಯ – 30 ನಿಮಿಷ ಎಸಿ, ಬೆಳಕಿಲ್ಲದೇ ಪ್ರಯಾಣಿಕರ ಪರದಾಟ

- Advertisement -
- Advertisement -

ನವದೆಹಲಿ: ವಡೋದರಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದೊಳಗೆ ಉಂಟಾದ ವಿದ್ಯುತ್ ವ್ಯತ್ಯಯದಿಂದ ಪ್ರಯಾಣಿಕರು 30 ನಿಮಿಷಗಳ ಕಾಲ ಎಸಿ, ಬೆಳಕು ಇಲ್ಲದೇ ಪರದಾಡಿದ್ದಾರೆ. ಪರಿಣಾಮ ವಿಮಾನವು ನಿಗದಿತ ಸಮಯಕ್ಕಿಂತ 80 ನಿಮಿಷ ತಡವಾಗಿ ಟೇಕಾಫ್‌ ಆಗಿದೆ.

ಭಾನುವಾರ ರಾತ್ರಿ ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ 6E-657 ವಿಮಾನ ರಾತ್ರಿ 8.40ಕ್ಕೆ ಟೇಕ್ ಆಫ್ ಆಗುವ ಮುನ್ನ ವಿಮಾನ ನೆಲದ ವಿದ್ಯುತ್ ಘಟಕಕ್ಕೆ ಸಂಪರ್ಕಗೊಂಡಿತ್ತು. ಈ ವೇಳೆ ಜಿಪಿಯು ಏಕಾಏಕಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಿಂದ ವಿಮಾನದ ಒಳಗಡೆ ವಿದ್ಯುತ್‌ ಸಂಪರ್ಕ ಕಡಿಗೊಂಡು ಕತ್ತಲಾಗಿತ್ತು. ಎಸಿ ಕೂಡ ಸ್ಥಗಿತಗೊಂಡಿತ್ತು.

ವಿಮಾನದ ಒಳಗಿದ್ದ 160 ಪ್ರಯಾಣಿಕರು ಸೆಕೆಯಿಂದ ಕತ್ತಲಲ್ಲೇ ಅರ್ಧ ಗಂಟೆಗಳ ಕಾಲ ಪರದಾಡಿದರು. ಎಸಿ ಕೆಲಸ ಮಾಡದೇ ಇದ್ದ ಕಾರಣ ಕ್ಯಾಬಿನ್ ಒಳಗೆ ಬಿಸಿಯ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಬೆವತು ಸುಸ್ತಾಗಿದ್ದರು. ತಾಂತ್ರಿಕ ದೋಷ ಸರಿಪಡಿಸಲು ಎಂಜಿನಿಯರ್‌ಗಳು ತಕ್ಷಣ ವಿಮಾನವಿದ್ದ ಸ್ಥಳಕ್ಕೆ ಧಾವಿಸಿದರು. 30 ನಿಮಿಷಗಳ ನಂತರ ಜಿಪಿಯು ಕಾರ್ಯನಿರ್ವಹಿಸತೊಡಗಿತು ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!