Monday, April 29, 2024
spot_imgspot_img
spot_imgspot_img

ಒಎಲ್‌ಎಕ್ಸ್ ನಲ್ಲಿ ಮಹಿಳೆಯೊಬ್ಬರಿಗೆ – ಲಕ್ಷಾಂತರ ವಂಚನೆ

- Advertisement -G L Acharya panikkar
- Advertisement -

ಮಹಿಳೆಯೊಬ್ಬರು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕೆ ಹಾಕಿದ್ದ ಸೊತ್ತುಗಳನ್ನು ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ವಂಚನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಷಾ ಕಿರಣ್ ಎಂಬ ಹೆಸರಿನವರು ಒಎಲ್‌ಎಕ್ಸ್ ನಲ್ಲಿ ಸ್ವತ್ತುಗಳ ಮಾರಾಟದ ಜಾಹಿರಾತು ಪಕಟಿಸಿದ್ದರು. ಇದನ್ನು ಗಮನಿಸಿದ ವಂಚಕನೊಬ್ಬ ಮಹಿಳೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದ. ಬಳಿಕ ಆಗಂತುಕ ಮಹಿಳೆಯೊಬ್ಬರು ಕರೆ ಮಾಡಿ ಉಷಾ ಕಿರಣ್ ಅವರ ಜೊತೆ ಮಾತನಾಡಿದ್ದು, ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದರು. ತನ್ನಲ್ಲಿ ನಗದು ಹಣವಿಲ್ಲ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದರು. ಎರಡು ಗಂಟೆಯ ಬಳಿಕ ಮಹಿಳೆಯ ಮೊಬೈಲ್ ಗೆ ಹಲವು ಕ್ಯೂಆರ್ ಕೋಡ್ ಗಳು ಬಂದಿದ್ದು, ಇದಾದ ಬಳಿಕ ಹಂತ ಹಂತವಾಗಿ ಉಷಾ ಕಿರಣ್ ರವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ.

ಒಟ್ಟು 1,28,496 ರೂಪಾಯಿಗಳನ್ನು ಉಷಾ ಕಿರಣ್ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!