Tuesday, April 30, 2024
spot_imgspot_img
spot_imgspot_img

ನೆಟ್ಲ : ನಿಟಿಲಾಪುರ ಹಿತರಕ್ಷಣ ಸಮಿತಿ ರಿಜಿಸ್ಟರ್ ಟ್ರಸ್ಟ್ ನಿಟಿಲಾಪುರ ವತಿಯಿಂದ ಉಚಿತ ಆರೋಗ್ಯ ಹಾಗೂ ದಂತ ತಪಾಸಣಾ ಶಿಬಿರ

- Advertisement -G L Acharya panikkar
- Advertisement -

ಆಲ್ ಕಾರ್ಗೋ ಲಾಜಿಸ್ಟಿಕ್ ಮಂಗಳೂರು ಮತ್ತು ಪ್ರಜ್ಞ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇವರ ಸಹಯೋಗದೊಂದಿಗೆ ನಿಟಿಲಾಪುರ ರಕ್ಷಣಾ ಸಮಿತಿ ಯ ವತಿಯಿಂದ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಹಾಗೂ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಇವರ ಸಹಕಾರದೊಂದಿಗೆ ದಿನಾಂಕ 10.12.2023ನೇ ರವಿವಾರ ಬೆಳಗ್ಗೆ 9:30 ರಿಂದ ಉಚಿತ ಆರೋಗ್ಯ ಹಾಗೂ ದಂತ ತಪಾಸಣಾ ಶಿಬಿರವು ನೆಟ್ಲ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಯಶಸ್ವಿಯಾಗಿ ಜರುಗಿತು.

ಶಿಬಿರವನ್ನು ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಮಿತಿ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಪದ್ಮನಾಭ ರೈ ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾದ ಸುಕನ್ಯಾ ಆಚಾರ್ಯ ಕೆಎಂಸಿ ಆಸ್ಪತ್ರೆಯ ಶಿಬಿರ ಯೋಜನಾಧಿಕಾರಿ ಆಲ್ಬರ್ಟ್ ಡಿಸೋಜಾ ದಂತ ಚಿಕಿತ್ಸಾ ತಜ್ಞರಾದ ಡಾ!ಅಪರ್ಣ, ಪ್ರಜ್ಞ ಸಲಹಾ ಕೇಂದ್ರದ ಸ್ಮಿತಾ ಡಿಸೋಜ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಭಟ್ಯಪ್ಪ ಶೆಟ್ಟಿ, ಗೌರವ ಸಲಹೆಗಾರರಾದ ಬಾಲಪ್ಪಗೌಡ, ಸಂಚಾಲಕರಾದ ರಮೇಶ್ ಪೂಜಾರಿ, ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಚೌಟ ಗ್ಯಾಸ್ ಏಜೆನ್ಸಿ ಮಾಲಕರಾದ ಶ್ರೀ ಜಗನ್ನಾಥ್ ಚೌಟ ಮಾಣಿ ಬದಿಗುಡ್ಡೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಖ್ಯಾತ ನ್ಯಾಯವಾದಿಗಳಾದ ಅಶ್ವನಿ ಕುಮಾರ್ ರೈ ಬಿ.ಸಿ ರೋಡ್ ,ಮಾಜಿ ಸಚಿವರಾದ ಶ್ರೀ ಬಿ ರಮನಾಥ ರೈ ಇವರುಗಳು ಆಗಮಿಸಿ ಶುಭ ಕೋರಿದರು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿ ಸಮಿತಿಯ ಕೋಶಧಿಕಾರಿಯವರಾದ ನವೀನ್ ಗಟ್ಟಿ ವಂದಿಸಿದರು.

ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಿವಿ ಮೂಗು ಗಂಟಲು ತಜ್ಞರು, ಸ್ತ್ರೀ ರೋಗ ತಜ್ಞರು, ಮಧುಮೇಹ ತಪಾಸಣೆ, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಕಣ್ಣಿನ ತಜ್ಞರು, ಎಲುಬು ತಜ್ಞರು, ದಂತ ತಜ್ಞರು ಈ ಎಲ್ಲ ವಿಭಾಗಗಳಿಗೆ ಸೇವೆಯನ್ನು ನೀಡಲಾಯಿತು. ಲಭ್ಯವಿರುವ ಔಷಧಿಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಯಿತು ಹಾಗೂ ಅವಶ್ಯಕತೆ ಇರುವವರಿಗೆ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು ಸುಮಾರು 200ರಷ್ಟು ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು

- Advertisement -

Related news

error: Content is protected !!