Friday, June 19, 2026
spot_imgspot_img
spot_imgspot_img

*ಕಾರಿನಲ್ಲಿ ಸಾಗಿಸುತ್ತಿದ್ದ 1ಕೋಟಿ ಮೌಲ್ಯದ ಗಾಂಜಾ ವಶ!

- Advertisement -
- Advertisement -

ತಿರುವನಂತಪುರಂ: ಆಂಧ್ರ ಪ್ರದೇಶದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಅಂದಾಜು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಕೇರಳ ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು, ಪ್ರಕರಣದಲ್ಲಿ ಓರ್ವ ಕೊಲೆ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ
ತಿರುವನಂತಪುರದಲ್ಲಿ ನಡೆದಿದೆ.

ಭಾರಿ ಪ್ರಮಾಣದ ಗಾಂಜಾವನ್ನು ಆರೋಪಿಗಳು ಎರಡು ಕಾರಿನಲ್ಲಿ ತುಂಬಿಕೊಂಡು ಆಂಧ್ರ ಪ್ರದೇಶದಿಂದ ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ ಸಾಗಿಸಿದ್ದರು. ಮಾರ್ಗ ಮಧ್ಯೆ ತಿರುವನಂತಪುರದ ಬಲರಾಮಪುರಂನಲ್ಲಿ ಕಾರುಗಳನ್ನು ತಡೆದು ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಜೋಮಿತ್​​ (38), ಸುರೇಶ್​​ ಕುಮಾರ್​ (32) ಮತ್ತು ವಿತಿನ್​ ರಾಜ್​ (30) ಎಂದು ಗುರುತಿಸಲಾಗಿದೆ. ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿ ಸುರೇಶ್​ ಕುಮಾರ್​ ತಿರುವನಂತಪುರಂ ಮತ್ತು ಕೊಲ್ಲಂನಲ್ಲಿ ದಾಖಲಾಗಿರುವ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿಗಳು ಡ್ರಗ್ಸ್​ ಸಾಗಾಟಕ್ಕೆ ಬಳಸಿಕೊಂಡಿದ್ದ ಎರಡು ಇನ್ನೋವಾ ಕಾರಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!