Monday, September 14, 2026
spot_imgspot_img
spot_imgspot_img

ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರ ಬಂಧನ

- Advertisement -
- Advertisement -

ಕೊಟ್ಟಿಗೆಹಾರ: ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಸನ ಕುಡಿಗೆಯಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.ಬಂಧಿತ ಆರೋಪಿಗಳು ಶಿವಮೊಗ್ಗದ ಮುಹಮ್ಮದ್ ಪರ್ವೀಜ್ (40) ಹಾಗೂ ಶ್ರೀನಿವಾಸ (30) ಎಂದು ತಿಳಿದು ಬಂದಿದೆ.ಬಾಳೂರಿನ ಬಾಸನ ಕುಡಿಗೆಯ ರಸ್ತೆ ಬಳಿ ಆಟೋ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಗಸ್ತು ತಿರುಗುತಿದ್ದ ಬಾಳೂರು ಸಬ್ ಇನ್ಸ್ ಪೆಕ್ಟರ್ ದಿಲೀಪ್ ಕುಮಾರ್ ಹಾಗೂ ಪೊಲೀಸರು ಅನುಮಾನಗೊಂಡು ಆಟೋರಿಕ್ಷಾ ತಪಾಸಣೆ ಮಾಡಿದಾಗ 195 ಗ್ರಾಂ ತೂಕದ ಗಾಂಜಾ ಸೊಪ್ಪು, ಸುತ್ತಲೂ ಬಳಸುವ ಟಿಪ್ಸ್, ಗಾಂಜಾ ಬಳಸುವ ಚಿಮಣಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ತಕ್ಷಣ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಬಂಧಿತ ಆರೋಪಿಗಳಿಂದ ಗಾಂಜಾ ಸೊಪ್ಪು, ಸುತ್ತಲೂ ಬಳಸುವ ಟಿಪ್ಸ್, ಗಾಂಜಾ ಬಳಸುವ ಚಿಮಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!