Tuesday, July 21, 2026
spot_imgspot_img
spot_imgspot_img

ಹಣಕಾಸು ಸಚಿವರನ್ನು ವಜಾಗೊಳಿಸಿದ ಜರ್ಮನ್ ಚಾನ್ಸಲರ್ ಓಲಾಫ್

- Advertisement -
- Advertisement -

ಬರ್ಲಿನ್: ಜರ್ಮನಿಯ ಹಣಕಾಸು ಸಚಿವರನ್ನು ಚಾನ್ಸಲರ್ ಓಲಾಫ್ ಸ್ಕೋಲ್ಡ್ ಪದಚ್ಯುತಿಗೊಳಿಸಿದ್ದು, 2025ರ ಜನವರಿಯಲ್ಲಿ ವಿಶ್ವಾಸಮತ ಯಾಚನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ನ.6ರಂದು ಪ್ರಕಟವಾಗಿತ್ತು. ಇದೀಗ ಇದರ ಬೆನ್ನಲ್ಲೇ, ಯುರೋಪಿನ ಬೃಹತ್ ಆರ್ಥಿಕತೆಗಳಲ್ಲಿ ಒಂದಾಗಿರುವ ಜರ್ಮನಿಯಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರುವ ಸಾಧ್ಯತೆ ಇದೆ.

ಚಾನ್ಸಲರ್ ಓಲಾಫ್ ಸ್ಕೋಲ್ಡ್ ಅವರು ಹಣಕಾಸು ಸಚಿವರೂ ಆಗಿರುವ ಮೈತ್ರಿಯ ಭಾಗವಾಗಿರುವ ‘ಫ್ರೀ ಡೆಮಾಕ್ರಟ್ಸ್ ಪಕ್ಷ’ದ (ಎಫ್‌ಡಿಪಿ) ಕ್ರಿಸ್ಟಿಯನ್ ಲಿಂಗ್ನರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ. ತಮ್ಮ ‘ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷ’ದೊಂದಿಗೆ ಏಕಾಂಗಿಯಾಗಿ ಅಥವಾ ಮಿತ್ರ ಪಕ್ಷ ‘ಗ್ರೀನ್ಸ್’ನೊಂದಿಗೆ ಸೇರಿ ಅಲ್ಪ ಬಹುಮತದ ಸರ್ಕಾರವನ್ನು ಮುನ್ನಡೆಸುವ ಲಕ್ಷಣವಿದೆ.

ಲಿಂಗ್ನರ್ ಅವರನ್ನು ವಜಾಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಓಲಾಫ್, ಸಮರ್ಥವಾಗಿ ಕಾರ್ಯನಿರ್ವಹಿಸುವ ಮತ್ತು ದೇಶಕ್ಕೆ ಅಗತ್ಯವಿರುವ ನಿರ್ಧಾರಗಳನ್ನು ಕೈಗೊಳ್ಳುವ ದೃಢ ಸರ್ಕಾರ ನಮಗೆ ಬೇಕಿದೆ. ಬಜೆಟ್ ವಿಚಾರಗಳಲ್ಲಿ ಮೂಗು ತೂರಿಸುವುದು, ನಿರ್ಧಾರಗಳಿಗೆ ತೊಡಕುಂಟು ಮಾಡುತ್ತಿದ್ದ ಕಾರಣಕ್ಕೆ ಲಿಂಗ್ನರ್ ಅವರನ್ನು ವಜಾಗೊಳಿಸಿರುವುದಾಗಿ ಹೇಳಿರುವ ಚಾನ್ಸಲರ್, ಅವರು (ಕ್ರಿಸ್ಟಿಯನ್ ಲಿಂಗ್ನರ್) ನಕಲಿ ಕಾರಣಗಳನ್ನು ಮುಂದೊಡ್ಡಿ ಕಾನುನುಗಳಿಗೆ ಅಡ್ಡಿಪಡಿಸುತ್ತಿದ್ದರು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!