Monday, May 6, 2024
spot_imgspot_img
spot_imgspot_img

ವಿದ್ಯಾಗಮ ಮರು ಅನುಷ್ಟಾನ‌ಕ್ಕೆ ಸರ್ಕಾರದ ನಿರ್ಧಾರ!!

- Advertisement -G L Acharya panikkar
- Advertisement -

ಸರ್ಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಅವಶ್ಯಕ, ಹೀಗಾಗಿಯೇ ಲೋಷ ದೋಷ ತಿದ್ದಿಕೊಂಡು ಮರು ಅನುಷ್ಟಾನ‌ಕ್ಕೆ ಸರ್ಕಾರ ನಿರ್ಧಾರ ಮಾಡಿದೆ.

ಸರ್ಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಬೇಕು. ಅನುಷ್ಠಾನದಲ್ಲಾದ ಕೆಲದೋಷದಿಂದಾಗಿ ಕೊರೊನಾ ಅಟ್ಟಹಾಸ ಮಾಡಿದ್ರಿಂದ ತಾತ್ಕಾಲಿಕ‌ವಾಗಿ ಸ್ಥಗಿತಗೊಂಡಿತ್ತು. ಸದ್ಯ 5ರಿಂದ 7ನೇ ತರಗತಿ ಮಕ್ಕಳಿಗೆ ದೂರದರ್ಶನದಲ್ಲಿ ಸಂವೇದಾ ತರಗತಿ ಮಾಡ್ಲಾಗ್ತಿದೆ. ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೇರ ಮುಖಾಮುಖಿ ಆಗುತ್ತಿಲ್ಲ. ಇನ್ನು ಆನ್‌ಲೈನ್‌ ಶಿಕ್ಷಣ ಸರಕಾರಿ ಶಾಲಾ ಮಕ್ಕಳಿಗೆ ಅರ್ಥ ಆಗ್ತಿಲ್ಲ. ಹೀಗಾಗಿಯೇ ವಿದ್ಯಾಗಮ ಪರಿಷ್ಕೃತ ಮಾದರಿಯಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ.

ಇನ್ನು ಪ್ರಮುಖವಾಗಿ 5 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭ ಮಾಡೋಕೆ ಚಿಂತಿಸಿದ್ದು ತರಗತಿಯಲ್ಲಿರೋ ಮಕ್ಕಳ ಸಂಖ್ಯೆಗನುಗುಣವಾಗಿ ಅನುಷ್ಟಾನ ಮಾಡುವ ಸಾಧ್ಯತೆ ಇದೆ. ಅದ್ರಲ್ಲೂ ಪ್ರಮುಖವಾಗಿ SSLCಗೆ ಬೋಧನೆ ಮಾಡುವ ಶಿಕ್ಷಕರನ್ನ ಹೊರತುಪಡಿಸಿ ಉಳಿದ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಯೋಜನೆ ಮರು ಅನುಷ್ಠಾನಗೊಳ್ಳಲಿದೆ.

ಶಾಲಾವರಣದಲ್ಲೇ ವಿದ್ಯಾಗಮದಡಿ ಬೋಧನೆ ಮಾಡಲಾಗುತ್ತೆ. ಸಾಮಾಜಿಕ ಅಂತರ, ಸುರಕ್ಷಾ ಕ್ರಮವನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತೆ. ಜೊತೆಗೆ ಪಾಳಿ ಪದ್ಧತಿ ಅಥವಾ ರೊಟೇಶನ್‌ ಮೂಲಕ ಕ್ಲಾಸ್‌ ಮಾಡಲಾಗುತ್ತೆ. ದಿನಕ್ಕೊಂದು ತರಗತಿಯಂತೆ ಜಾರಿಗೆ ತರೋಕೆ ಚಿಂತನೆ ಮಾಡಲಾಗಿದ್ದು ಶಿಕ್ಷಕರ ಲಭ್ಯತೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕ್ಲಾಸ್‌ ನಡೆಯುತ್ತೆ. ಆಗ್ಲೇ ಹೇಳಿದಂತೆ 5 ರಿಂದ 9ನೇ ತರಗತಿಗೆ, ಆಮೇಲೆ ಹಂತ ಹಂತವಾಗಿ ಕ್ಲಾಸ್‌ ನಡೆಯೋ ಸಾಧ್ಯತೆ ಇದ್ದು ಕೆಲ ಮಾರ್ಪಾಟುಗಳೊಂದಿಗೆ ವಿದ್ಯಾಗಮ ಮರು ಅನುಷ್ಠಾನಗೊಳ್ಳಲಿದೆ.

- Advertisement -

Related news

error: Content is protected !!