


ವಿಟ್ಲ : ಮಾಡತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 1975-76 ನೇ ಸಾಲಿನ 7 ನೇ ತರಗತಿ ಮತ್ತು ಕುಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 1973-74 ಸಾಲಿನ 5 ನೇ ತರಗತಿಯ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ಕುಂಡಡ್ಕ ಮರುವಾಳ ಲೋಕನಾಥ ಎಂ ಶೆಟ್ಟಿ ಇವರ ಮನೆಯಲ್ಲಿ ನಡೆಯಿತು .
ಗುರುಗಳಾದ ಎ.ರಾಮಚಂದ್ರ ಭಟ್ ಅಲಂಗಾರು ಇವರು ನಿವೃತ್ತಿಯ 30 ಸಂವತ್ಸರಗಳ ಸಂಭ್ರಮಾಚರಣೆಯ ಪ್ರಯುಕ್ತ ಅವರ ಸ್ವಗೃಹಕ್ಕೆ ತೆರಳಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು .

ಬಳಿಕ ಮರುವಾಳ ಮನೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಲೋಕನಾಥ ಎಂ ಶೆಟ್ಟಿ ನಡೆಸಿಕೊಟ್ಟರು .
ಬಳಿಕ ನಡೆದ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು .
ಈ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಲೋಕನಾಥ ಎಂ ಶೆಟ್ಟಿ ,ಬಾಲಕೃಷ್ಣ ಭಟ್ ,ನಾರಾಯಣ ಪೂಜಾರಿ ಎಸ್.ಕೆ, ತಿಮ್ಮಪ್ಪ ಪೂಜಾರಿ ,ಗಣೇಶ ಸಪಲ್ಯ,ಶೀನಪ್ಪ ನಾಯ್ಕ ,ಜಗನ್ನಾಥ ಶೆಟ್ಟಿ ,ಮಾಧವ ಪೂಜಾರಿ ,ಲಿಂಗಪ್ಪ ಗೌಡ ,ಗಣಪತಿ ನಾಯಕ್ ,ಈಶ್ವರ ಮಡಿವಾಳ ,ಗಿರಿಯಪ್ಪ ಪೂಜಾರಿ ,ಶಿವಪ್ಪ ಗೌಡ ,ನಾರಾಯಣ s ಪೂಜಾರಿ ,ನಾರಾಯಣ ಶೆಟ್ಟಿ ,ಚೆನ್ನಪ್ಪ ಗೌಡ ,ಶಿವಪ್ಪ ಗೌಡ ಓಟೆ,ಭಾಗವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಮಹಾಭಲೇಶ್ವರ ಭಟ್ ಮತ್ತು ವೇಣುಗೋಪಾಲ ಶೆಟ್ಟಿ ಮರುವಾಳ ಭಾಗವಹಿಸಿದ್ದರು .
ಲೋಕನಾಥ ಎಂ ಶೆಟ್ಟಿಯವರು ಸ್ವಾಗತಿಸಿ, . ನಾರಾಯಣ ಪೂಜಾರಿ s k ವಂದಿಸಿದರು, ಭೋಜನ ವ್ಯವಸ್ಥೆಯನ್ನು ಆಶಾ ಲೋಕನಾಥ ಶೆಟ್ಟಿ ಮಾಡಿದರು.








