Thursday, July 23, 2026
spot_imgspot_img
spot_imgspot_img

ತಲೆಹೊಟ್ಟು ನಿವಾರಣೆಗೆ ಮನೆ ಮದ್ದನ್ನು ಬಳಸಿ

- Advertisement -
- Advertisement -

ಬೇವು: ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಸೋಂಕನ್ನು ನಿವಾರಿಸುತ್ತದೆ. ಹಾಗಾಗಿ ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ನಿಂಬೆ ರಸ ಮತ್ತು ಅರಶಿನ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ.

ಅಲೋವೆರಾ ಜೆಲ್: ಇದು ಸೋಂಕನ್ನು ತಡೆಯಲು ಸಹಕಾರಿ. ಇದನ್ನು ಕೂದಲಿಗೆ ಹಚ್ಚುವುದರಿಂದ ಕಿರಿಕಿರಿ, ತುರಿಕೆ ನಿವಾರಣೆಯಾಗುತ್ತದೆ. ಹಾಗಾಗಿ ಕೂದಲಿಗೆ ಅಲೋವೆರಾ ಜೆಲ್ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ.

ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದಾಗಿ ನೆತ್ತಿಯಲ್ಲಿ ಸೋಂಕು ಉಂಟಾಗಿ ತುರಿಕೆ ಕಂಡುಬರುತ್ತದೆ. ಇದು ತಲೆಹೊಟ್ಟಿಗೆ ಕಾರಣವಾಗುತ್ತದೆ. ಈ ಸೋಂಕನ್ನು ನಿವಾರಿಸಲು ಈ ಮನೆ ಮದ್ದನ್ನು ಬಳಸಿ.

- Advertisement -

Related news

error: Content is protected !!