Tuesday, October 20, 2026
spot_imgspot_img
spot_imgspot_img

ಮಕ್ಕಳ ಕೈಗೆ ವಾಹನ ಕೊಡುವುದು ಆಟಿಕೆಯಲ್ಲ, ರಸ್ತೆ ಆಟದ ಮೈದಾನವಲ್ಲ- ಹೈಕೋರ್ಟ್

- Advertisement -
- Advertisement -

ಬೆಂಗಳೂರು: ಮೈಸೂರಿನಲ್ಲಿ 14 ವರ್ಷದ ಬಾಲಕನೋರ್ವ ಕಾರು ಚಲಾಯಿಸಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದಕ್ಕೆ ಅದು ಆಟಿಕೆಯಲ್ಲ ಮತ್ತು ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಈ ಪ್ರಕರಣದ ಅಪರಾಧ ಮುಕ್ತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ಆರೋಪಿ ಬಾಲಕನ ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ಹೇಳಿದೆ.

2020ರ ಡಿಸೆಂಬರ್‌ನಲ್ಲಿ ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದ ಈ ಅಪಘಾತದಲ್ಲಿ ದಂಪತಿ ಹಾಗೂ ಅವರ 5 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತ ನಡೆಸಿದ ಕಾರನ್ನು ಅರ್ಜಿದಾರ ನದೀಮ್-ಉರ್-ರೆಹಮಾನ್ ಅವರ ಮಾಲೀಕರು ಅವರಿಗೆ ನೀಡಿದ್ದರು. ತನಗೆ ಅರಿವಿಲ್ಲದಂತೆ ಮಗ ಆ ಕಾರನ್ನು ತೆಗೆದುಕೊಂಡು ಹೋಗಿದ್ದಾನೆಂದು ನದೀಮ್ ಹೇಳಿದ್ದರು.

ಹೀಗಾಗಿ ಇದು ಉದ್ದೇಶಪೂರ್ವಕವಲ್ಲದ ನರಹತ್ಯೆಯೆಂದು ಪರಿಗಣಿಸಿ ದೋಷಾರೋಪ ಪಟ್ಟಿ ರದ್ದುಪಡಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ‘ಕಷ್ಟ ಬಂದಾಗ ಮಗನ ಅಪ್ರಾಪ್ತತೆಯ ಸಬೂಬು ಹೇಳಿ ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಅರ್ಜಿದಾರರು ತಾವೇ ಮಗನಿಗೆ ಗಾಡಿಯ ಕೀ ಕೊಟ್ಟು ಕಳುಹಿಸಿರುವುದು ದೋಷಾರೋಪ ಪಟ್ಟಿಯಲ್ಲಿ ಸಾಬೀತಾಗಿದೆ. ಪೋಷಕರು ಸ್ವಇಚ್ಛೆಯಿಂದ ವಾಹನದ ಕೀಗಳನ್ನು ಅಪ್ರಾಪ್ತರಿಗೆ ನೀಡಿದಾಗ ಸಂಭವಿಸುವ ದುರಂತಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ. ಇದು ಕೇವಲ ನಿರ್ಲಕ್ಷ್ಯವೇ ಅಥವಾ ಕುಕೃತ್ಯವೇ ಎಂಬುದು ವಿಚಾರಣೆಯ ಹಂತದಲ್ಲಿ ನಿರ್ಧಾರವಾಗಲಿದೆ’ ಎಂದು ಕೋರ್ಟ್ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!