Sunday, July 26, 2026
spot_imgspot_img
spot_imgspot_img

ಹಾಸನ : ರಸ್ತೆ ಬದಿ ಕಸ ಹಾಕ್ತಿದ್ದವರ ಮನೆ ಅಂಗಳಕ್ಕೆ ತ್ಯಾಜ್ಯ ಸುರಿದ ಮಹಾನಗರಪಾಲಿಕೆ ಸಿಬ್ಬಂದಿ!

- Advertisement -
- Advertisement -

ಹಾಸನ: ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದವರ ಮನೆಯ ಕಾಂಪೌಂಡ್ ಒಳಗೆ ಒಂದು ಲೋಡ್ ಕಸವನ್ನು ಸಿಬ್ಬಂದಿ ಸುರಿದಿದ್ದಾರೆ.

ಹಾಸನ ನಗರದ ಉದಯಗಿರಿ ಬಡಾವಣೆಗೆ ಹೋಗುವ ರಸ್ತೆಯ ಕರಿಯಪ್ಪ-ದ್ಯಾವಮ್ಮ ಎಂಬುವವರಿಗೆ ಸೇರಿದ ಮನೆಯವರು ರಸ್ತೆ ಬದಿ ಕಸ ಎಸೆಯುತ್ತಿದ್ದರು. ಹಲವು ಬಾರಿ ಮಹಾನಗರಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರ. ಆದರೂ ರಸ್ತೆ ಬದಿ ಕಸ ಎಸೆಯುತ್ತಿದ್ದರು. ಬೆಳಿಗ್ಗೆ ಪೌರಕಾರ್ಮಿಕರು ಒಂದು ಲೋಡ್ ಕಸವನ್ನು ಮನೆಯ ಆವರಣಕ್ಕೆ ಸುರಿದಿದ್ದಾರೆ. ಈ ವೇಳೆ ಮಹಿಳೆ ಮಹಾನಗರಪಾಲಿಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು ಎಂದು ವರದಿ ಮೂಲಕ ತಿಳಿದು ಬಂದಿದೆ

- Advertisement -

Related news

error: Content is protected !!