Sunday, July 19, 2026
spot_imgspot_img
spot_imgspot_img

ಕೋಲ್ಸಿಫ್ ಸಿರಫ್‌ ನಿಷೇಧಿಸಿದ ದೆಹಲಿ ಸರ್ಕಾರ

- Advertisement -
- Advertisement -

ನವದೆಹಲಿ: ಕೋಲ್ಮೀಫ್ ಕಾಫ್‌ ಸಿರಪ್ ಬಳಸಿಮಧ್ಯಪ್ರದೇಶದಲ್ಲಿ 20 ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಘಟನೆಯ ಬಳಿಕ ದೆಹಲಿ ಸರ್ಕಾರ ಈ ಸಿರಪ್ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಈ ಸಿರಪ್ ಮಾರಾಟ ಮತ್ತು ಖರೀದಿಯನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.ಕೋಲ್ಮೀಫ್ ಸಿರಪ್ ಗುಣಮಟ್ಟ ಕಳಪೆಯಾಗಿದ್ದು, ಆ ಕಾರಣದಿಂದ ದೆಹಲಿ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿರುವುದಾಗಿದೆ. ಮಕ್ಕಳಿಗೆ ನೆಗಡಿ, ಕೆಮ್ಮು ಬಂದಾಗ ವೈದ್ಯರು ಕೋಲ್ಮೀಫ್ ಸಿರಪ್ ಶಿಫಾರಸ್ಸು ಮಾಡುತ್ತಾರೆ. ಆದರೆ ಅದನ್ನು ಸೇವಿಸಿದ ಬಳಿಕ ಮಕ್ಕಳ ಆರೋಗ್ಯ ಮತ್ತಷ್ಟು ಹದೆಗೆಟ್ಟು 20 ಮಕ್ಕಳು ಮೃತಪಟ್ಟದ್ದಾಗಿ ತಿಳಿದು ಬಂದಿದೆ.

ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಡೆಕ್ಕೊಮೆಥೋರ್ಫಾನ್ ಹೈಡೋಟ್ರೋಮೈಡ್ ಸಿರಪ್ ಶಿಫಾರಸು ಮಾಡದಂತೆ ಆದೇಶ ಹೊರಡಿಸಿತ್ತು. 2021 ರಲ್ಲಿ ಕೆಲವು ಮಕ್ಕಳು ಮೊಹಲ್ಲಾ ಚಿಕಿತ್ಸಾಲಯದಲ್ಲಿ ಈ ಸಿರಪ್ ಸೇವಿಸಿದ ಬಳಿಕ ಅನಾರೋಗ್ಯಕ್ಕೆ ಒಳಗಾದರೂ ಮೂವರು ಸಾವನ್ನಪ್ಪಿದ್ದರು. ನಂತರ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (DGHS) ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದು, ಈ ಸಿರಪ್ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡಬಾರದು ಎಂದು ಎಚ್ಚರಿಕೆ ನೀಡಿರುವುದಾಗಿದೆ.

- Advertisement -

Related news

error: Content is protected !!