Saturday, June 6, 2026
spot_imgspot_img
spot_imgspot_img

ಸುರತ್ಕಲ್: ಹೃದಯಾಘಾತಕ್ಕೆ ಯುವತಿ ಬಲಿ

- Advertisement -
- Advertisement -

ಸುರತ್ಕಲ್: ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ಯುವತಿ ಸಸಿಹಿತ್ಲು ಅಗ್ನಿದ ಕಳಿಯ ನಿವಾಸಿ ದಿ.ರಾಜೇಶ್ ಎಂಬವರ ಪುತ್ರಿ ರೋಶನಿ (23) ಎಂದು ಗುರುತಿಸಲಾಗಿದೆ.

ಯುವತಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ಮನೆಗೆ ಬಂದಿದ್ದಳು ಜ್ವರ ಉಲ್ಬಣಗೊಂಡಿದ್ದರಿಂದ ಮನೆಯವರು ಆಕೆಯನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಆದರೆ ಬುಧವಾರ ಸಂಜೆಯ ವೇಳೆ ಯುವತಿಗೆ ಹೃದಯಾಘಾತ ಸಂಭವಿಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

- Advertisement -

Related news

error: Content is protected !!