Tuesday, July 1, 2025
spot_imgspot_img
spot_imgspot_img

ಡೆಂಘೀ ಜ್ವರಕ್ಕೆ ಪ್ರಾರಂಭದಲ್ಲಿನ ಮನೆಮದ್ದು

- Advertisement -
- Advertisement -

ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಘೀ ಜ್ವರ ಸೊಳ್ಳೆಯಿಂದ  ಹರಡುವ ರೋಗವಾಗಿದ್ದು, ಇದು ಪ್ರತಿ ವರ್ಷ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿನ ಜನರನ್ನು ಕಾಡುವ ಕಾಯಿಲೆಯಾಗಿದೆ. ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಡೆಂಘೀ ಪ್ರಕರಣಗಳು ಎಲ್ಲೆಡೆ ಹೆಚ್ಚಾಗುತ್ತವೆ.

ತೀವ್ರ ಜ್ವರ, ತಲೆನೋವು, ಕಣ್ಣುಗಳಲ್ಲಿ ನೋವು, ತುಂಬಾ ಆಯಾಸ, ಕೀಲು ನೋವು, ಚರ್ಮದ ಮೇಲೆ ದದ್ದು, ವಾಕರಿಕೆ ಮತ್ತು ವಾಂತಿ ಇವೆಲ್ಲವೂ ಡೆಂಘೀನ ಕೆಲವು ರೋಗ ಲಕ್ಷಣಗಳಾಗಿವೆ ಎಂದು ಹೇಳಬಹುದು. ಡೆಂಘೀ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.
ಪ್ರಾರಂಭದಲ್ಲಿ ಅಮೃತ ಬಳ್ಳಿ  ರಸವು ಡೆಂಘೀ ಜ್ವರಕ್ಕೆ ತುಂಬಾನೇ ಪರಿಣಾಮಕಾರಿಯಾದ ಪರಿಹಾರವಾಗಿದೆ. ಈ ರಸವು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಡೆಂಘೀ ಜ್ವರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಬಲವಾದ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಇದು ಪ್ಲೇಟ್ಲೆಟ್ ಎಣಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ .  ಅಮೃತ ಬಳ್ಳಿಯ ಗಿಡದ ಎರಡು ಸಣ್ಣ ಕಾಂಡಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಬಹುದು. ಈ ನೀರನ್ನು ಸ್ವಲ್ಪ ಬೆಚ್ಚಗಿದ್ದಾಗ ಸೇವಿಸಿ.

- Advertisement -

Related news

error: Content is protected !!