Thursday, April 18, 2024
spot_imgspot_img
spot_imgspot_img

IAS ಅಧಿಕಾರಿಯ ಮೇಲೆ ಪ್ರೇಮ ಕಾಮ ಮೋಸದಾಟದ ಆರೋಪ; PM, CMಗೆ ದೂರು ಕೊಟ್ಟ ಯುವತಿ

- Advertisement -G L Acharya panikkar
- Advertisement -

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ವಿರುದ್ಧ ಲವ್, ಸೆಕ್ಸ್ ದೋಖಾ ಆರೋಪ ಕೇಳಿ ಬಂದಿದೆ. ಮದುವೆಯಾಗಿ ನಂಬಿಸಿ ಐಎಎಸ್ ಅಧಿಕಾರಿ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿ ಆರೋಪ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚನ ಸೃಷ್ಟಿಸಿದೆ.

2017ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸ್ನೇಹಲ್ ಲೋಖಂಡೆ 2019ರಲ್ಲಿ ಪರಿಚಯವಾದ ದೆಹಲಿ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್’ಗೆ ಕರೆದೊಯೊಯ್ದು ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಬಳಿಕ ಐ-ಪಿಲ್ ಟ್ಯಾಬ್ಲೆಟ್ ನುಂಗಲು ಹೇಳಿದ್ದರಂತೆ. ಅಲ್ಲದೇ ಅಧಿಕಾರಿ ತನಗೆ ಅಶ್ಲೀಲ ಸಂದೇಶಗಳನ್ನು ಕೂಡ ಯುವತಿ ಟ್ವಿಟರ್‌ನಲ್ಲಿ ಹಂಚಿಕೊ0ಡಿದ್ದಾರೆ.

ಅಷ್ಟೇ ಅಲ್ಲದೆ ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವೆ ಸ್ಮೃತಿ ಇರಾನಿ, ಸಿಎಂ ಬೊಮ್ಮಾಯಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಿಎಂ ಕಾರ್ಯದರ್ಶಿಗೂ ಸಂತ್ರಸ್ತ ಯುವತಿ ಟ್ವಿಟರ್‌ನಲ್ಲಿ ದೂರು ದಾಖಲಿಸಿದ್ದಾರೆ. ಆದರೆ ದೂರು ನೀಡಿ ಒಂದು ವಾರವಾದರೂ ಕ್ರಮ ಕೈಗೊಂಡಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. ಈ ಆರೋಪಗಳನ್ನು ನಿರಾಕರಿಸಿರುವ ಸ್ನೇಹಲ್, ಯುವತಿ ಯಾರು ಎಂದೇ ನನಗೆ ಗೊತ್ತಿಲ್ಲ. ಈ ಬಗ್ಗೆ ಯುವತಿ ವಿರುದ್ಧ ದೂರು ನೀಡುವುದಾಗಿ ಐಎಎಸ್ ಅಧಿಕಾರಿ ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!