- Advertisement -
- Advertisement -
ರಷ್ಯಾ: ಮಿನ್ಸ್ಕ್ ಇನ್ಸ್ಟಿಟ್ಯೂಟ್ ಫಾರ್ ಮೀಟ್ ಅಂಡ್ ಡೈರಿಯ ಸಂಶೋಧಕ ‘ರೂಪ್ಟ್ಲಿ’ ಮಾಂಸ ಮತ್ತು ಐಸ್ ಕ್ರೀಮ್ ಅನ್ನು ಒಟ್ಟಿಗೆ ಬೆರೆಸಿ ಅದಕ್ಕೆ’ ಐಸ್ ಮೀಟ್’ ಎಂದು ಹೆಸರಿಟ್ಟಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದ ಬೆಲಾಗ್ರೊ -2020 ಪ್ರದರ್ಶನದಲ್ಲಿ ಐಸ್ ಮಾಂಸವನ್ನು ಮೊದಲು ಸಾರ್ವಜನಿಕರಿಗೆ ಪರಿಚಯಿಸಿದ್ದಾರೆ.
ಡೈರಿ ಉತ್ಪನ್ನಗಳು ಮತ್ತು ಮಾಂಸವನ್ನು ಒಳಗೊಂಡಿರುವ ದ್ರವವನ್ನು ಐಸ್ ಕ್ರೀಮ್ ತಯಾರಿಸುವ ಯಂತ್ರದಲ್ಲಿ ಹಾಕುತ್ತಾರೆ. ಸ್ವಲ್ಪ ಸಮಯದ ನಂತರ, ಮೃದುವಾದ ಸರ್ವ್ ಐಸ್ ಕ್ರೀಮ್ ಗಿಂತ ಸ್ವಲ್ಪ ದಪ್ಪವಾದ ಐಸ್ ಮಾಂಸ ಹೊರಬರುತ್ತದೆ. ಈ ಸಂಶೋಧನೆಯ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರಿಂದ ಟೀಕೆಗಳು ಕಾಮೆಂಟ್ ಮೂಲಕ ಹರಿದಾಡಿದೆ.

ಐಸ್ ಮಾಂಸವು ಪ್ರೋಟೀನ್ ಮತ್ತು ಕೊಬ್ಬು ಎರಡನ್ನೂ ಹೊಂದಿರುತ್ತದೆ. ಇದರಲ್ಲಿ ಯಾವುದೇ ಕೃತಕ ಸಕ್ಕರೆ ಸೇರಿಸಲಾಗಿಲ್ಲ, ಇದು ಮಧುಮೇಹ ಇರುವವರಿಗೂ ಖಾದ್ಯವಾಗುವಂತೆ ಮಾಡುತ್ತದೆ ಎನ್ನುವುದು ರೂಪ್ಟ್ಲಿ ಅವರ ಅಭಿಪ್ರಾಯ.

- Advertisement -








