ನವದೆಹಲಿ: ಕೇಂದ್ರ ಸರ್ಕಾರ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ವಿರುದ್ಧ ತಿರುಗಿಬೀಳುತ್ತಿದ್ದಂತೆಯೇ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದಕಾರಿ ವಿಚಾರಗಳನ್ನ ಟ್ವೀಟ್ ಮಾಡುತ್ತಿದ್ದ ಸುಮಾರು 97 ಪ್ರತಿಷ್ಟಿತ ಅಕೌಂಟ್ಗಳನ್ನ ಬ್ಲಾಕ್ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇನ್ನು ಬ್ಲಾಕ್ ಮಾಡಲಾದ ಅಕೌಂಟ್ಗಳಲ್ಲಿ ಬಹುತೇಕ ಖಾತೆಗಳು ಪಾಕಿಸ್ತಾನ ಮತ್ತು ಖಲಿಸ್ತಾನ ಬೆಂಬಲಿಗರಿಂದ ಬಳಕೆಯಾಗುತ್ತಿದ್ದವು ಎನ್ನಲಾಗಿದೆ. ಒಟ್ಟು 1,435 ಅಕೌಂಟ್ಗಳನ್ನ ಟ್ವಿಟರ್ ಗುರುತು ಮಾಡಿದ್ದು ಈ ಪೈಕಿ 1,398 ಅಕೌಂಟ್ಗಳನ್ನ ಬ್ಲಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

ಈ ಪೈಕಿ 257 ಅಕೌಂಟ್ಗಳು (#genocide) ನರಮೇಧ ಹೆಸರಿನ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದವು. ಇವುಗಳನ್ನ ಬ್ಲಾಕ್ ಮಾಡಲಾಗಿದೆ. ಕೆಲವು ಅಕೌಂಟ್ಗಳು ಡೂಪ್ಲಿಕೇಟ್ ಆಗಿರುವುದರಿಂದ ಅವುಗಳನ್ನ ಬ್ಲಾಕ್ ಮಾಡುವ ಪ್ರಮೇಯಿಲ್ಲ.

ಇನ್ನು ಸಿಪಿಎಮ್ ಮೊಹಮ್ಮದ್ ಸಲೀಂ ಮತ್ತು ಕ್ಯಾರವಾನ್ ಮ್ಯಾಗಜೀನ್ನ ಅಕೌಂಟ್ಗಳು ಈಗಲೂ ಚಾಲ್ತಿಯಲ್ಲಿವೆ. 1,178 ಅಕೌಂಟ್ಗಳನ್ನು ಸರ್ಕಾರವೇ ಫ್ಲಾಗ್ ಮಾಡಿದೆ.. ಖಲಿಸ್ತಾನಿ ಮತ್ತು ಪಾಕಿಸ್ತಾನಿ ಶಕ್ತಿಗಳಿಂದ ಬಳಕೆಯಾಗುತ್ತಿದ್ದ ಅಕೌಂಟ್ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸರ್ಕಾರ ಮೂಲಗಳು ಹೇಳಿವೆ.

ಇನ್ನುಳಿದ ಕೆಲವು ಅಕೌಂಟ್ಗಳೂ ಸಹ ಬ್ಲಾಕ್ ಆಗಲಿವೆ. ಆದರೆ ಅವುಗಳನ್ನ ಬ್ಲಾಕ್ ಮಾಡುವ ಮುನ್ನ ಬಳಕೆದಾರರಿಗೆ ನೋಟಿಸ್ ಕಳುಹಿಸುವಂಥ ಪ್ರಕ್ರಿಯೆಗಳನ್ನ ಫಾಲೋ ಮಾಡಬೇಕಿದ್ದು ಇದಕ್ಕಾಗಿ ಸಮಯ ಹಿಡಿಯುತ್ತದೆ ಎಂದು ಟ್ವಿಟರ್ ಸರ್ಕಾರಕ್ಕೆ ತಿಳಿಸಿದೆ ಎನ್ನಲಾಗಿದೆ.










