Sunday, June 21, 2026
spot_imgspot_img
spot_imgspot_img

ಇಡ್ಕಿದು: ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಇಡ್ಕಿದು ಗ್ರಾಮ ಪಂಚಾಯತ್‌‌ ಮುಂಭಾಗ ಪ್ರತಿಭಟನೆ

- Advertisement -
- Advertisement -

ಜನಗಳಿಗೆ ಬೇಕಾದ ಅನೂಕೂಲಕರವಾದ ವಾತವಾರಣ ನಿರ್ಮಾಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು: ದಯಾನಂದ ಶೆಟ್ಟಿ ಉಜಿರೆಮಾರ್

ಇಡ್ಕಿದು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಇಡ್ಕಿದು ಗ್ರಾಮ ಪಂಚಾಯತ್‌‌ ಮುಂಭಾಗ ಪ್ರತಿಭಟನೆ ನಡೆಯಿತು.

ಇಡ್ಕಿದು ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಪ್ಪಾರ್ಚಾನೆ ಸೂಚಿಸಿ.

9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ ಸಕ್ರಮ ತಿರಸ್ಕಾರ, ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರಕಾರವು ಜನಸಾಮಾನ್ಯರಿಗೆ ನೀಡುತ್ತಿರುವ ಸರಕಾರಿ ಸೇವೆಗಳನ್ನು ಕಠಿಣಗೊಳಿಸಿರುವುದನ್ನು ತಕ್ಷಣದಿಂದಲೇ ಕೈ ಬಿಡುವಂತೆ ಸರಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡುವ ಮೂಲಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕಳೆದ 2 ವರ್ಷಗಳಿಂದ ಕರ್ನಾಟಕ ರಾಜ್ಯ ಸರಕಾರವನ್ನು ಆಳ್ವಿಕೆ ಮಾಡುತ್ತಿರುವ ಕಾಂಗ್ರೆಸ್‌ ನೇತೃತ್ವದ ಸರಕಾರವು ಜನವಿರೋದಧಿ ನಿಯಾಮವಳಿಗಳನ್ನು ಜಾರಿಗೊಳಿಸಿದ್ದು, ಈ ಕೆಳಗಿನ ಎಲ್ಲಾ ಆದೇಶಗಳನ್ನು ರದ್ದುಪಡಿಸಿ ತಕ್ಷಣದಿಂದಲೇ ಕಾರ್ಯೋನ್ಮುಖರಾಗಲು ಕರ್ನಾಟಕ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಈ ಮೂಲಕ ಆಗ್ರಹ ಪತ್ರ ನೀಡಲಾಗಿದೆ.

*94 ಸಿ ಹಕ್ಕು ಪತ್ರಗಳಿಗೆ 9/11 ಖಾತಾ ನೀಡುವುದನ್ನು ತಡೆ ಮಾಡಿರುವುದನ್ನು ತಕ್ಷಣದಿಂದಲೇ ಬಿಟ್ಟು ಹಿಂದಿನನ ಮಾದರಿಯಲ್ಲಿ 9/11ಖಾತಾ ನೀಡಬೇಕು.

  • ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಿರುವುದನ್ನು ಕೈ ಬಿಡಬೇಕು.
    *ಪ್ಲೋಟಿಂಗ್‌‌ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿ ಕೊಂಡವರಿಗೆಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿರುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು.
    *ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆ, ಕೋಳಿ ಫಾರಂ ಇತ್ಯಾದಿಗಳಿಗೆ ವಿದ್ಯುತ್‌ ಸಂಪರ್ಕವನ್ನು ತಡೆ ಹಿಡಿದಿರುವುದನ್ನು ರದ್ದುಗೊಳಿಸಬೇಕು.
  • ಗ್ರಾಮ ಪಂಚಾಯತ್‌ಗಳಲ್ಲಿ 9/11 ಪಡೆಯಬೇಕಾದರೆ ಲೇಔಟ೧‌ ನಕ್ಷೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿ(ಮೂಡ)ದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯುವ ಬಗ್ಗೆ ಆದೇಶ ಹೊರಡಿಸಿರುವುದನ್ನು ಕೈ ಬಿಟ್ಟು ಈ ಹಿಂದಿನಂತೆ ನಿಯಮ ಜಾರಿಗೆ ತರಬೇಕು.
    *ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕರಕ್ಕೆ ಕಾರ್ಮಿಕ ಇಲಾಖೆಯ ಪ್ರಮಾಣ ಪತ್ರ ಪಡೆಯಲು ಆದೇಶ ಮಾಡಿರುವುದನ್ನು ಕೈ ಬಿಟ್ಟು ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ ನೀಡಬೇಕು.
    *ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿಯಿಂದ (ಮೂಡ) ಪ್ರಾರಂಭಿಕ ಪ್ರಮಾಣ ಪತ್ರ ಪಡೆಯಲು ಆದೇಶ ಮಾಡಿರುವುದನ್ನು ಕೈ ಬಿಟ್ಟು ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯತ್‌ಗಳಿಗೆ ವಹಿಸಬೇಕು.
    *ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಲ್ಲಿನ 1-5 ಪ್ಲೋಟಿಂಗ್ ಆಗದಿರುವ ನೂರಾರು ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು.
    *ಗ್ರಾಮೀಣ ಭಾಗದ ಬಡ ಜನರಿಗೆ ವಾಸ್ತವ್ಯಕ್ಕೆ ಸೂರು ಒದಗಿಸುವ ವಸತಿ ಯೋಜನೆಗಳು ಸಂಪೂರ್ಣ ಸ್ಥಗಿತ ಮಾಡಲಾಗಿದ್ದು, ಪ್ರತಿ ಗ್ರಾಮ ಪಂಚಾಯತ್‌ಗೆ ಕನಿಷ್ಠ 100 ವಸತಿ ಮನೆಗಳನ್ನು ಮಂಜೂರು ಮಾಡಬೇಕು.
    *ಕೃಷಿಕರಿಗೆ ನೀರಾವರಿ ಪಂಪು ಸೆಟ್ಟಿಗಳಿಗೆ ಯಾವುದೇ ಸಾಮಾಗ್ರಿಗಳನ್ನು ನೀಡದೇ, ಅಭಿವೃದ್ಧಿ ಶುಲ್ಕ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಕೈ ಬಿಟ್ಟು ರೈತರ ಪಂಪು ಸೆಟ್ಟುಗಳಿಗೆ ವಿದ್ಯುತ್ ನಿಗಮ ವತಿಯಿಂದಲೇ ಉಚಿತ ಸಾಮಾಗ್ರಿ ನೀಡಿ ಸಂಪರ್ಕ ನೀಡಬೇಕು.
    *ಮನೆ ನಿವೇಶನ ರಹಿತ ಕುಟುಂಬಗಳಿಗೆ ಸರಕಾರಿ ಜಮೀನು ಗುರುತಿಸಿ ಶೀಘ್ರದಲ್ಲಿ ಮನೆ ನಿವೇಶನ ವಿತರಿಸಬೇಕು.
    *ಗ್ರಾಮೀಣ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವ ಮರಳು ಮತ್ತು ಕೆಂಪುಕಲ್ಲು ಸಾಗಾಣಿಕೆಗೆ ಶಿಸ್ತು ನಿಯಮ ಸರಳೀಕರಣಗೊಳಿಸಿ ಮನೆ ಕಟ್ಟಲಿರುವ ಅದೆಷ್ಟೋ ಮಂದಿ ಬಡವರು ಮತ್ತು ಕಾರ್ಮಿಕರ ಬದುಕಿಗೆ ನೆರವಾಗಬೇಕು.
    *ವೃದ್ಧಾಪ್ಯ ವೇತನ ವಿಧವಾ ವೇತನ, ಸಂಧ್ಯಾ ಸುರಕ್ಷಾ ವಿಕಲಚೇತನರ ವೇತನ ಸೇರಿದಂತೆ ಎಲ್ಲಾ ಪಿಂಚಣಿ ಸೌಲಭ್ಯಗಳನ್ನು ಆದಾಯ ಮಿತಿಯಲ್ಲಿ ರದ್ದುಗೊಳಿಸಿರುವುದನ್ನು ತಕ್ಷಣದಿಂದ ಕೈ ಬಿಟ್ಟು ಯಾಥಾಸ್ಥಿತಿಯಲ್ಲಿ ಮುಂದುವರಿಸಬೇಕು.
    *ಕಾರ್ಮಿಕರ ವಿದ್ಯಾರ್ಥಿವೇತನ ಸೇರಿದಂತೆ ಎಲ್ಲಾ ವಿಧಧ ವಿದ್ಯಾರ್ಥಿವೇತನಗಳ ಮೊತ್ತ ಕಡಿತಗೊಳಿಸಿರುವುದನ್ನು ಕೈಬಿಟ್ಟು ಈ ಹಿಂದಿನಂತೆ ವಿದ್ಯಾರ್ಥಿವೇತನ ನೀಡಬೇಕು.
  • ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ 94 ಸಿ ಅಡಿಯಲ್ಲಿ ಹಕ್ಕುಪತ್ರ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು.
  • ರೈತರು ಕೃಷಿ ಮಾಡಿಕೊಂಡಿರುವ ಜಮೀನಿಗೆ ಹಕ್ಕು ಪಡೆಯುವ ಉದ್ದೇಶದಿಂದ ಅಕ್ರಮ – ಸಕ್ರಮದಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಏಕಪಕ್ಷೀಯವಾಗಿ ಕೈಬಿಟ್ಟು ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ತೀರ್ಮಾನವಾಗಬೇಕು.
    *ಜಮೀನಿನ ಪರಾಬಾರೆ, ಎಗ್ರಿಮೆಂಟ್ ಕರಾರು ಪತ್ರ ಇತ್ಯಾದಿ ಬಗ್ಗೆ ಸ್ಟಾಂಪ್ ಪೇಪರ್ ನೋಂದಣಿ ಶುಲ್ಕವನ್ನು 10ಪಟ್ಟು ಹೆಚ್ಚಿಸಿರುವುದನ್ನು ಪರಿಷ್ಕರಿಸಿ ನೋಂದಣಿ ಶುಲ್ಕವನ್ನು ಕಡಿತಗೊಳಿಸಬೇಕು.
    *ವಿದ್ಯುತ್ ಬಿಲ್ಲ್‌‌ ಮೊತ್ತದಲ್ಲಿ ನೌಕರರ ಪಿಂಚಣಿ ಶುಲ್ಕವನ್ನು ಸೇರ್ಪಡೆ ಮಾಡಿದ್ದನ್ನು ರದ್ದುಗೊಳಿಸಿ, ವಿದ್ಯುತ್ ದರ ಕಡಿತಗೊಳಿಸಬೇಕು.
    *ಸಾವಿರಾರು ಅರ್ಹ ಬಡಕುಟುಂಬಗಳು BPL ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿರುವುದನ್ನು ತಕ್ಷಣದಿಂದಲೇ ಅರ್ಜಿಗಳನ್ನು ವಿಲೇವಾರಿ ಮಾಡಿ BPLಪಡಿತರಚೀಟಿವಿತರಿಸಬೇಕು.
    *ಮಳೆ ಹಾನಿ, ಪ್ರಾಕೃತಿಕ ವಿಕೋಪ ಸೇರಿದಂತೆ ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.
    *ರೈತರಿಗೆ ಬಾಕಿ ಇರುವ ಸಾಲ ಮನ್ನಾದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು.
    *ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾ.ಪಂ ನೌಕರರನ್ನು ಖಾಯಂ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಪುತ್ತೂರು ಗ್ರಾಮಾಂತ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೊಡಿ ಪದ್ಮನಾಭ ಭಟ್‌‌, ಕುಳ ಮತ್ತು ಇಡ್ಕಿದು ಶಕ್ತಿ ಕೇಂದ್ರದ ಪ್ರಮುಖ ಪ್ರಶಾಂತ್‌ ಬರೆ ಮತ್ತು ನಾಗೇಶ್‌, ಶಕ್ತಿ ಕೇಂದ್ರದ ಪ್ರಮುಖ ಚಿದಾನಂದ, ಸುರೇಶ್‌ ಉಕ್ಕುಡ, ಕೃಷ್ಣ ತಿಲಕ್‌ ರಾಜ್‌ ಶೆಟ್ಜಿ ಹಾಗೂ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!