Tuesday, July 28, 2026
spot_imgspot_img
spot_imgspot_img

ಭಾರತೀಯ ಸೇನೆಯಲ್ಲಿ ಖಾಯಂ ಸೇವೆಗೆ ಶೇ.49 ರಷ್ಟು ಮಹಿಳಾ ಅಧಿಕಾರಿಗಳ ಆಯ್ಕೆ

- Advertisement -
- Advertisement -

ನವದೆಹಲಿ: ಭಾರತೀಯ ಸೇನೆಯಲ್ಲಿ ಖಾಯಂ ನೇಮಕಾತಿ ಪರಿಗಣನೆಗೆ ತೆಗೆದುಕೊಂಡಿದ್ದ ಮಹಿಳಾ ಅಧಿಕಾರಿಗಳಲ್ಲಿ ಶೇಕಡ 49ರಷ್ಟು ಅಧಿಕಾರಿಗಳನ್ನ ಆಯ್ಕೆ ಮಾಡಲಾಗಿದೆ.


ಮಹಿಳಾ ಅಧಿಕಾರಿಗಳನ್ನೂ ಕೂಡ ಖಾಯಂ ನೇಮಕಾತಿಗೆ ಪರಿಗಣಿಸಬೇಕು ಎಂದು ಕಳೆದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇದೇ ಮೊದಲ ಬಾರಿಗೆ ವಿಶೇಷ ಆಯ್ಕೆ ಸಮಿತಿ ಅಭ್ಯರ್ಥಿಗಳ ನೇಮಕಾತಿಗೆ ಪರಿಶೀಲನೆ ನಡೆಸಿತ್ತು.

ಶಾರ್ಟ್ ಸರ್ವೀಸ್ ಕಮಿಷನ್​​​​ನ ಸೆಪ್ಷಲ್ ನಂಬರ್ 5 ಸೆಲೆಕ್ಷನ್ ಬೋರ್ಡ್​​ನ ಫಲಿತಾಂಶವನ್ನ ಭಾರತೀಯ ಸೇನೆ ನಿನ್ನೆ ಪ್ರಕಟಿಸಿದೆ. 615 ಮಹಿಳಾ ಅಧಿಕಾರಿಗಳ ಪೈಕಿ 300 ಅಧಿಕಾರಿಗಳನ್ನ ಖಾಯಂ ನೇಮಕಾತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆಯ ಮಾನದಂಡಗಳು ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ವಿಫಲರಾದ ಮಹಿಳಾ ಅಧಿಕಾರಿಗಳು 20 ವರ್ಷದ ಸೇವಾವಧಿ ಮುಗಿದ ಬಳಿಕ ನಿವೃತ್ತಿಯನ್ನ ಹೊಂದಲಿದ್ದಾರೆ. ಆದ್ರೆ ಅವ್ರು ಪಿಂಚಣಿ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ ಅಂತ ಭಾರತೀಯ ಸೇನೆ ತಿಳಿಸಿದೆ.

- Advertisement -

Related news

error: Content is protected !!