- Advertisement -
- Advertisement -
ನವದೆಹಲಿ: ಇಂಗ್ಲೆಂಡ್ಗೆ ವಿಮಾನ ಹಾರಾಟವನ್ನ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಹೊಸ ಮ್ಯೂಟಂಟ್ ಕೊರೊನಾ ವೈರಸ್ ಇಂಗ್ಲೆಂಡ್ನಲ್ಲಿ ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿ ಹೆಚ್ಚಾಗುತ್ತಿದೆ. ಒಂದೇ ದಿನ ಇಂಗ್ಲೆಂಡ್ನಲ್ಲಿ 35,928 ಕೇಸ್ಗಳು ಪತ್ತೆಯಾಗಿದ್ದು, ಯುರೋಪಿನಾದ್ಯಂತ ಈ ಮ್ಯೂಟಂಟ್ ಕೊರೊನಾ ಆತಂಕ ಮೂಡಿಸಿದೆ. ಹೀಗಾಗಿ ಭಾರತ ಸರ್ಕಾರ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನ ನಿಷೇಧಿಸಲಾಗಿದೆ.

ಹೀಗಾಗಿ ಭಾರತದಿಂದ ಯಾವುದೇ ವಿಮಾನಗಳು ಲಂಡನ್ಗೆ ಹಾರಾಟ ನಡೆಸಲ್ಲ. ಜೊತೆಗೆ ಲಂಡನ್ನಿಂದ ಭಾರತಕ್ಕೆ ಯಾವುದೇ ವಿಮಾನಗಳ ಸೇವೆ ಇರುವುದಿಲ್ಲ. ನಾಳೆ ರಾತ್ರಿ 11.59 ರಿಂದ ಡಿಸೆಂಬರ್ 31ರ ರಾತ್ರಿ 11.59ರ ವರೆಗೆ ಯಾವುದೇ ವಿಮಾನ ಸೇವೆ ಇರುವುದಿಲ್ಲ ಅಂತಾ ಕೇಂದ್ರ ನಾಗರಿಕ ವಿಮಾನಯಾನ
ಸಚಿವಾಲಯ ತಿಳಿಸಿದೆ.

- Advertisement -








