Saturday, April 27, 2024
spot_imgspot_img
spot_imgspot_img

ರಕ್ಷಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿರುವ ಇಂಡಿಯನ್ ಆರ್ಮಿ! – ಸ್ವದೇಶಿ “ಆಸ್ಮಿ”ಯನ್ನು ಅಭಿವೃದ್ಧಿಪಡಿಸಿದ ಡಿಆರ್​ಡಿಒ

- Advertisement -G L Acharya panikkar
- Advertisement -

ನವದೆಹಲಿ: ರಕ್ಷಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಸ್ಟ್ರಾಂಗ್ ಆಗುತ್ತಿರುವ ಇಂಡಿಯನ್ ಆರ್ಮಿ. ತನ್ನಲ್ಲಿರುವ ಎಲ್ಲಾ ವೆಪನ್​ಗಳ ಆಧುನೀಕರಣ ಮಾಡುತ್ತಿದೆ.

ಹೊಸ ಹೊಸ ತಂತ್ರಜ್ಞಾನಗಳನ್ನ ಸೇನೆಗೆ ಅಳವಡಿಸುತ್ತಿರುವ ಡಿಆರ್​ಡಿಒ (Defence Research and Development Organisation) ಇದೀಗ ಮೊದಲ ಬಾರಿಗೆ ದೇಶಿಯವಾಗಿ 9mm ಮೆಷಿನ್ ಪಿಸ್ತೂಲ್ ಅಭಿವೃದ್ಧಿಮಾಡಿದೆ. ಡಿಆರ್​ಡಿಒ ಮತ್ತು ಇಂಡಿಯನ್ ಆರ್ಮಿ ನೇತ್ವದಲ್ಲಿ ಮೆಷಿನ್ ಪಿಸ್ತೂಲ್​ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಮೆಷಿನ್ ಪಿಸ್ತೂಲ್​ನಿಂದ 9 mm ಮದ್ದುಗುಂಡುಗಳನ್ನ ಫೈರ್ ಮಾಡಬಹುದು. ನೂತನ ಈ ಪಿಸ್ತೂಲ್​ಗೆ ಅಸ್ಮಿ (Asmi) ಅಂತಾ ಹೆಸರನ್ನ ಇಡಲಾಗಿದೆ. ಒಂದು ಮೆಷಿನ್​​ ಪಿಸ್ತೂಲ್​​​ ತಯಾರಿಕೆಗೆ ಕೇವಲ ₹50 ಸಾವಿರ ಮಾತ್ರ ತಗಲುತ್ತದೆ. ಸೆಲ್ಫ್​ ಲೋಡಿಂಗ್ ವರ್ಷನ್ ಇದಾಗಿದ್ದು, ಸಂಪೂರ್ಣ ಅಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ.

3 ಡಿ ಪ್ರಿಂಟಿಂಗ್ ಟೆಕ್ನಾಲಜಿಯನ್ನ ಬಳಸಿಕೊಂಡು ಪಿಸ್ತೂಲ್ ಅಭಿವೃದ್ಧಿ ಮಾಡಲಾಗಿದೆ. ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬಹುದಾಗಿದೆ. ಉಗ್ರರಿಗೆ ಕೌಂಟರ್​ ಕೊಡಲು ಇದು ಸಹಾಯಕವಾಗಲಿದೆ.

ಪ್ರಧಾನಿ ಮೋದಿ ರವರ ಆತ್ಮ ನಿರ್ಭರ್ ಸಂಕಲ್ಪದಡಿ ನಿರ್ಮಾಣವಾಗಿರುವ ಈ ಪಿಸ್ತೂಲ್​, ಸಂಪೂರ್ಣವಾಗಿ ದೇಶಿಯ ಮೆಟಿರಿಯಲ್​ಗಳನ್ನ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಅಸ್ಮಿ ಎಂದು ನಾಮಕರಣ ಮಾಡಲಾಗಿದ್ದು ಅಂದ್ರೆ ‘ಹೆಮ್ಮೆಯ’, ‘ಸ್ವಾಭಿಮಾನಿ’ ಮತ್ತು ‘ಕಠಿಣ ಪರಿಶ್ರಮ’ (“Pride”, “Self-Respect” & “Hard Work) ಅಂತಾ ಡಿಆರ್​ಡಿಒ ಬಣ್ಣಿಸಿದೆ.

- Advertisement -

Related news

error: Content is protected !!