- Advertisement -
- Advertisement -
ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಕೇಕೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸದ್ಯಕ್ಕೆ ಆರಂಭಿಸದಿರಲು ಕೇಂದ್ರ
ಸರಕಾರ ನಿರ್ಧರಿಸಿದೆ.ಜುಲೈ ಒಂದರಿಂದ ಆಯ್ದ ವಿದೇಶಿ ನಗರಗಳಿಗೆ ವಿಮಾನ ಸೇವೆ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ.


ಜುಲೈ 15ರವರೆಗೆ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನದ ಹಾರಾಟಕ್ಕೆ ಅನುಮತಿ ಇಲ್ಲ ಎಂದು ನಾರಿಕ ವಿಮಾನಯಾನ ಖಾತೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ನಿರ್ಬಂಧ ಸರಕು ಸಾಗಣೆ ವಿಮಾನಗಳಿಗೆ ಅನ್ವಯ ಆಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಲಾಕ್ ಡಾನ್ ಮುಗಿದ ಕಂತಿನ ಭಾಗವಾಗಿ ಆಯ್ದ ಅಂತಾರಾಷ್ಟ್ರೀಯ ನಗರಗಳಿಗೆ ವಿಮಾನ ಸಂಚಾರ ಆರಂಭವಾಗಬಹುದು ಎಂಬ ನಿರೀಕ್ಷೆ ಪ್ರಯಾಣಿಕರಲ್ಲಿ ಇತ್ತು.

ಈಗ ಸಂಚರಿಸುತ್ತಿರುವ ಶ್ರಮಿಕ, ರಾಜಧಾನಿ ಹಾಗೂ ವಿಶೇಷ ರೈಲುಗಳನ್ನು ಹೊರತುಪಡಿಸಿ ಆಗಸ್ಟ್ 12ರ ತನಕ ಉಳಿದ ರೈಲುಗಳ ಸಂಚಾರ ಆರಂಭಕ್ಕೆ ಸರಕಾರ ನಿನ್ನೆ (ಗುರುವಾರ)ಯಷ್ಟೇ ಒಲ್ಲೆ ಎಂದಿತ್ತು.
- Advertisement -