Sunday, April 28, 2024
spot_imgspot_img
spot_imgspot_img

IPL 2021: ಈ ಬಾರಿ ಕಪ್ ನಮ್ದೆ ಎಂದಿದ್ದಾರೆ ದೆಹಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಭ್ ಪಂತ್

- Advertisement -G L Acharya panikkar
- Advertisement -

ನವದೆಹಲಿ: ನಾವು ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಭ್ ಪಂತ್ ಹೇಳಿದ್ದಾರೆ.

2 ನಾವು 3 ವರ್ಷಗಳಿಂದ ಉತ್ತಮವಾಗಿ ಆಡುತ್ತಿದ್ದೇವೆ. ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಈ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ.

ನಾಯಕತ್ವ ಸಿಕ್ಕಿದ್ದು ಸಾಕಷ್ಟು ರೋಮಾಂಚನಕಾರಿ ಆಗಿದ್ದು, ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆಯಲು ಬಯಸುತ್ತೇನೆ “ಈ ಅವಕಾಶವನ್ನು ನೀಡಿದ ನನ್ನ ಎಲ್ಲಾ ತರಬೇತುದಾರರು ಮತ್ತು ತಂಡದ ಮಾಲೀಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕಾಗಿದೆ ಎಂದಿದ್ದಾರೆ.

ಈ ಬಾರಿ ನಮ್ಮ ಸಿದ್ಧತೆಗಳು ತುಂಬಾ ಉತ್ತಮವಾಗಿವೆ. ತಂಡದ ವಾತಾವರಣದಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾಯಕ ಇದಕ್ಕಿಂತ ಹೆಚ್ಚೇನೂ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ತಂಡದ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರ ಬಗ್ಗೆ ಕೇಳಿದಾಗ, “ಕಳೆದ 2-3 ವರ್ಷಗಳಲ್ಲಿ ರಿಕಿ ನಮಗೆ ಉತ್ತಮ ಸಲಹೆ ಸೂಚನೆ ನೀಡಿದ್ದಾರೆ. ಅವರು ತಂಡದೊಳಗೆ ಹೊಸ ಶಕ್ತಿಯನ್ನು ತರುತ್ತಾರೆ ಮತ್ತು ಅವರನ್ನು ನೋಡುವಾಗ ಆಟಗಾರನಾಗಿ ಅಂತಹ ವ್ಯಕ್ತಿಯಿಂದ ಬಹಳಷ್ಟು ಕಲಿಯಬಹುದು. ಈ ಸಮಯದಲ್ಲಿ ನಾವು ರಿಕಿ ಮತ್ತು ಇಡೀ ತಂಡದ ಸಹಾಯದಿಂದ ಕಪ್ ಗೆಲ್ಲಬಹುದೆಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

driving
- Advertisement -

Related news

error: Content is protected !!