Friday, March 29, 2024
spot_imgspot_img
spot_imgspot_img

IPL2021: CSK ವಿರುದ್ಧ ಡೆಲ್ಲಿಗೆ 3 ವಿಕೆಟ್​​ಗಳ ರೋಚಕ ಜಯ

- Advertisement -G L Acharya panikkar
- Advertisement -
driving

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್​​​​ 14ನೇ ಸೀಸನ್​​ನ 50ನೇ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಎಂ. ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಚೆನ್ನೈ ಅಂಬಾಟಿ ರಾಯುಡು ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ನಲ್ಲಿ 5 ವಿಕೆಟ್​ ಕಳೆದುಕೊಂಡು 136 ರನ್​ ಕಲೆ ಹಾಕಿತ್ತು. ಈ ರನ್​​ಗಳ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 7 ವಿಕೆಟ್​​ ನಷ್ಟಕ್ಕೆ 19.4 ಓವರ್​​ನಲ್ಲಿ 139 ರನ್​​ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಐಪಿಎಲ್​​​​ ಅಂಕ ಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನದಲ್ಲಿದೆ.

ಸಿಎಸ್​​ಕೆ ತಂಡದ ಪರ ರುತುರಾಜ್ ಗಾಯಕ್ವಾಡ್ 13, ಫಾಫ್ ಡು ಪ್ಲೆಸಿಸ್ 10, ರಾಬಿನ್ ಉತ್ತಪ್ಪ 19, ಅಂಬಟಿ ರಾಯುಡು 55, ಎಂಎಸ್ ಧೋನಿ (ನಾಯಕ) 18 ರನ್​​ ಗಳಿಸಿ ಸಾಧಾರಣ ಮೊತ್ತ ಪೇರಿಸಿದ್ದರು.

ಡೆಲ್ಲಿ ಪರ ಪೃಥ್ವಿ ಶಾ 18, ಶಿಖರ್ ಧವನ್ 39, ರಿಷಭ್ ಪಂತ್ (ನಾಯಕ) 15, ರಿಪಲ್ ಪಟೇಲ್ 18, ಔಟಾಗದೆ ಶಿಮ್ರಾನ್ ಹೆಟ್ಮೆಯರ್ 28 ರನ್​​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

- Advertisement -

Related news

error: Content is protected !!