Saturday, April 20, 2024
spot_imgspot_img
spot_imgspot_img

IPL 2021: ಡೆಲ್ಲಿ ವಿರುದ್ಧ ರೋಚಕ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದ ಕೆಕೆಆರ್

- Advertisement -G L Acharya panikkar
- Advertisement -

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂದಿನ ಕ್ವಾಲಿಫೈಯರ್ 2 ಮ್ಯಾಚ್​​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಮೊದಲಿಗೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. 136 ರನ್​ಗಳ ಗುರಿ ಬೆನ್ನು ಹತ್ತಿದ ಕೊಲ್ಕತ್ತಾ ಟೀಂ 19.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 136ರನ್​ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 18, ಧವನ್ 36, ಸ್ಟೋಯ್ನಿಸ್ 18, ಶ್ರೇಯಸ್ ಅಯ್ಯರ್ 30, ಪಂತ್ 6, ಹೆಟ್ಮೆಯರ್ 17, ಅಕ್ಸರ್ 4 ರನ್ ಗಳಿಸಿದ್ದರು.

ಇನ್ನು ಕೊಲ್ಕತ್ತಾ ಪರ ಬ್ಯಾಟ್ ಬೀಸಿದ ಶುಬ್​ಮನ್ ಗಿಲ್ 46, ವೆಂಕಟೇಶ್ ಅಯ್ಯರ್ 55, ನಿತೀಶ್ ರಾಣಾ 13, ರಾಹುಲ್ ತ್ರಿಪಾಠಿ 12 ರನ್ ಗಳಿಸಿದ್ರು.

driving
- Advertisement -

Related news

error: Content is protected !!