Friday, March 29, 2024
spot_imgspot_img
spot_imgspot_img

IPL ಐದನೇ ಪಂದ್ಯಾಟ: ಕೊಲ್ಕತ್ತಾ ನೈಟ್ ರೈಡರ್ಸ್ Vs ಮುಂಬೈ ಇಂಡಿಯನ್ಸ್!

- Advertisement -G L Acharya panikkar
- Advertisement -

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಐದನೇ ಪಂದ್ಯ ಇಂದು ( ಏಪ್ರಿಲ್ 13 ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲನ್ನು ಅನುಭವಿಸಿತ್ತು. ಇತ್ತ ಕೊಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಈಗಾಗಲೇ 2 ಅಂಕಿಗಳನ್ನು ಪಡೆದುಕೊಂಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇದುವರೆಗೂ ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು 21 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದ್ದರೆ, ಕೇವಲ 6 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಜಯ ಗಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡವಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಆಟವನ್ನಾಡಿರುವ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮ 823 ರನ್ ಬಾರಿಸಿದ್ದರೆ, ಸೂರ್ಯಕುಮಾರ್ ಯಾದವ್ 367 ರನ್ ಬಾರಿಸಿದ್ದಾರೆ. ಬೌಲಿಂಗ್‌ ವಿಭಾಗಕ್ಕೆ ಬಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಸುನಿಲ್ ನರೇನ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಮುಂಬೈ ವಿರುದ್ಧ ಸುನೀಲ್ ನರೇನ್ ಇದುವರೆಗೂ 22 ವಿಕೆಟ್‍ಗಳನ್ನು ಪಡೆದಿದ್ದಾರೆ. ಹಾಗೂ ಮುಂಬೈ ತಂಡದ ಜಸ್ಪ್ರೀತ್ ಬೂಮ್ರಾ 12 ಮತ್ತು ಹಾರ್ದಿಕ್ ಪಾಂಡ್ಯ 11 ವಿಕೆಟ್‍ಗಳನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಡೆದಿದ್ದಾರೆ.

ಕಳೆದ ಆವೃತ್ತಿಯಲ್ಲಿ ನಡೆದ ಮುಂಬೈ ಮತ್ತು ಕೊಲ್ಕತ್ತಾ ನಡುವಿನ ಎರಡೂ ಪಂದ್ಯಗಳನ್ನು ಸಹ ಮುಂಬೈ ವಶಪಡಿಸಿಕೊಂಡಿತ್ತು. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಒಟ್ಟು 2 ಪಂದ್ಯಗಳು ನಡೆದಿದ್ದವು. ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 49 ರನ್‌ಗಳ ಗೆಲುವು ಸಾಧಿಸಿತ್ತು ಮತ್ತು ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊಲ್ಕತ್ತಾ ವಿರುದ್ಧ 8 ವಿಕೆಟ್‍ಗಳ ಜಯ ಸಾಧಿಸಿತ್ತು.

ayo
- Advertisement -

Related news

error: Content is protected !!