Friday, April 19, 2024
spot_imgspot_img
spot_imgspot_img

ಐಪಿಎಲ್ 2021: ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 19 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್

- Advertisement -G L Acharya panikkar
- Advertisement -

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರನ್​ ಹೊಳೆಯೇ ಹರಿದಿದ್ದು, ವಿರೋಚಿತ ಹೋರಾಟದಲ್ಲಿ ಕೋಲ್ಕತ್ತಾ ನೈಟ್​​ ರೈಡರ್ಸ್​​ ತಂಡ ಸೋಲುಂಡಿದೆ. ಪಂದ್ಯದಲ್ಲಿ ಚೆನ್ನೈ ತಂಡ 5 ಎಸೆತ ಬಾಕಿ ಇರುವಂತೆಯೇ 19 ರನ್​ಗಳ ಭರ್ಜರಿ ಗೆಲುವು ಪಡೆದುಕೊಂಡಿದೆ.

ಚೆನ್ನೈ ವಿರುದ್ದ ಗೆಲ್ಲಲು 221 ರನ್​ಗಳ ಬಹೃತ್ ಟಾರ್ಗೆಟ್​ ಪಡೆದ ಕೆಕೆಆರ್ ಉತ್ತಮ ಆರಂಭ ಪಡೆಯಲಿಲ್ಲ. 5.2 ಓವರ್​ ಗಳಲ್ಲಿ ಕೇವಲ 31 ರನ್​ಗಳಿಸಿದ್ದ ಕೆಕೆಆರ್ ತಂಡ ತನ್ನ ಬ್ಯಾಟಿಂಗ್​​ ಲೈನ್​​ನ ಪ್ರಮುಖ ಐವರು ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ದಿನೇಶ್​ ಕಾರ್ತಿಕ್​ ಮತ್ತು ರಸೆಲ್ ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ ಗೆಲುವಿನ ಆಸೆಯನ್ನು ಚಿಗುರೊಡೆಯುವಂತೆ ಮಾಡಿದ್ದರು.

22 ಎಸೆತಗಳಲ್ಲಿ 54 ರನ್​ಗಳಿಸಿ ಚೆನ್ನೈ ಮಾರಕವಾಗಿ ಪರಿಣಮಿಸುತ್ತಿದ್ದ ರಸೆಲ್​​​ರನ್ನು ಸ್ಯಾಮ್ ಕರನ್ ಪೆವಿಲಿಯನ್​​​ಗೆ ಕಳುಹಿಸಲು ಯಶಸ್ವಿಯಾದರು. ಆ ವೇಳೆಗೆ ಕೆಕೆಆರ್ 11.2 ಓವರ್ ಗಳಲ್ಲಿ 112 ರನ್​ ಗಳಿಸಿತ್ತು.

ಕೋಲ್ಕತ್ತಾ ಗೆಲುವಿಗೆ ಸಾಕಷ್ಟು ಶ್ರಮಿಸಿದ ಪ್ಯಾಟ್ ಕಮ್ಮಿನ್ಸ್ 34 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 4 ಬೌಂಡರಿಗಳ ನೆರವಿನಿಂದ 66 ರನ್​ಗಳಿಸಿದರು. ವಿಕೆಟ್ ಉರುಳುತ್ತಿದ್ದರೂ ರನ್ ಗಳಿಕೆಯ ವೇಗವನ್ನು ಹೆಚ್ಚಿಸುತ್ತಲೇ ಸಾಗಿದ ಕಮ್ಮಿನ್ಸ್, ಕರನ್​ ಬೌಲಿಂಗ್​​ನಲ್ಲಿ ಬರೋಬ್ಬರಿ 30 ರನ್ ಸಿಡಿಸಿ ಮಿಂಚಿದ್ದರು. ಆದರೆ ದಿನೇಶ್​ ಕಾರ್ತಿಕ್ 40 ರನ್​ಗಳಿಸಿ ನಿಗರ್ಮಿಸಿದರು. ಆದರೆ ಕಮ್ಮಿನ್ಸ್ ಸ್ಟ್ರೈಕ್ ಗಳಿಸುವ ಎರಡು ರನ್​​ ಔಟ್​ಗಳು ಕೋಲ್ಕತ್ತಾ ತಂಡದ ಹೋರಾಟವನ್ನು 202 ರನ್​​ಗಳಿಗೆ ಅಂತ್ಯಗೊಳಿಸಿತು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ಋತುರಾಜ್ ಗಾಯಕವಾಡ್​, ಡುಪ್ಲೆಸಿಸ್​​ರ ಅಜೇಯ 95 ರನ್​​ಗಳ ನೆರವಿನಿಂದ 220 ರನ್​​ಗಳ ಬೃಹತ್ ಮೊತ್ತವನ್ನು ಪೇರಿಸಿತು. ಉಳಿದಂತೆ ಚೆನ್ನೈ ಪರ ಧೋನಿ 17 ರನ್, ಮೊಯಿನ್ ಅಲಿ 25 ಹಾಗೂ ಒಂದು ಎಸೆತ ಎದುರಿಸಿದ ಜಡೇಜಾ 6 ರನ್ ಗಳಿಸಿದರು.

- Advertisement -

Related news

error: Content is protected !!