Sunday, July 19, 2026
spot_imgspot_img
spot_imgspot_img

ಇರಾನ್ ನಿಂದ ವಿದ್ಯಾ ರ್ಥಿಗಳು ಸಹಿತ ಹಲವು ಭಾರತೀಯರು ಭಾರತಕ್ಕೆ ರಿಟರ್ನ್

- Advertisement -
- Advertisement -

ಹೊಸದಿಲ್ಲಿ ,ಜ.17: ವ್ಯಾ ಪಕವಾದ ಆಡಳಿತ ವಿರೋಧಿ ಪ್ರ ತಿಭಟನೆಯನ್ನು ಎದುರಿಸುತ್ತಿರುವ ಇರಾನ್ ನಿಂದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಭಾರತೀಯರು ಶುಕ್ರವಾರ ತಡರಾತ್ರಿ ಹೊಸದಿಲ್ಲಿಯ ವಿಮಾನನಿಲ್ದಾ ಣದಲ್ಲಿ ಬಂದಿಳಿದಿದ್ದಾರೆ.


12-13 ಮಂದಿಯ ಭಾರತೀಯರ ತಂಡದಲ್ಲಿದ್ದ ಅಲ್ ನಕ್ವಿ ಯವರನ್ನು ಹೊಸದಿಲ್ಲಿಯ ವಿಮಾನ ನಿಲ್ದಾ ಣದಲ್ಲಿ ಸಂದರ್ಶಿಸಿದ ಪತ್ರಕರ್ತರು, ಇರಾನ್ ನಲ್ಲಿ ಯಾವುದೇ ರೀತಿಯ ತೊಂದರೆಯನ್ನು ಎದುರಿಸಿದ್ದೀರಾ ಎಂಬುದಾಗಿ ಪ್ರಶ್ನಿಸಿದಾಗ, ತನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲವೆಂದು ತಿಳಿಸಿದರು.
‘‘ನಾವು ಟೆಹರಾನ್ನಿಂದ ಆಗಮಿಸಿದ್ದೇವೆ. ಇದಕ್ಕೂ ಮುನ್ನ ನಾವು ಇರಾಕ್ ನಲ್ಲಿದ್ದು ಅಲ್ಲಿಂದ ಇರಾನ್ ಗೆ ಪ್ರಯಾಣಿಸಿದ್ದೇವೆ. ಸುಮಾರು 8 ದಿನಗಳ ವಾಸ್ತವ್ಯ ದ ಆನಂತರ ನಾವು ಭಾರತಕ್ಕೆ ವಾಪಸಾಗಿದ್ದೇವೆ’’ ಎಂದವರು ಪಿಟಿಐಗೆ ತಿಳಿಸಿದ್ದಾರೆ.

ಶಿರಾಝ್ನ ವೈದ್ಯ ಕೀಯ ಕಾಲೇಜ್ನಲ್ಲಿ ಕಲಿಯುತ್ತಿಯುವ ವಿದ್ಯಾ ರ್ಥಿನಿಯೊಬ್ಬರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಅಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿಲ್ಲ . ದೇಶಾದ್ಯಂತ ಏನಾಗುತ್ತಿದೆಯೆಂಬುದು ನಿಖರವಾಗಿ ಗೊತ್ತಾಗುತ್ತಿಲ್ಲವೆಂದರು.


ತಾನಿದ್ದ ಶಿರಾಝ್ ನಗರದಲ್ಲಿ ಪರಿಸ್ಥಿತಿ ಉತ್ತಮವಾಗಿತ್ತು . ತಾವೆಲ್ಲಾ ಸ್ವಂ ತ ಖರ್ಚಿನಲ್ಲಿ ವಾಣಿಜ್ಯ ವಿಮಾನದಲ್ಲಿ ಆಗಮಿಸಿದ್ದೇವೆಯೇ ಹೊರತು ಭಾರತ ಸರಕಾರವು ಏರ್ಪಾಡು ಮಾಡಿಲ್ಲವೆಂದು ಹೇಳಿದರು.


ಇರಾನ್ ನಿಂದ ವಾಪಾಸಾ ತಮ್ಮ ಬಂಧುಗಳನ್ನು ಸ್ವಾಗತಿಸಲು ದಿಲ್ಲಿ ವಿಮಾನ ನಿಲ್ದಾ ಣದಲ್ಲಿ ಜ.16ರಂದು ಭಾರೀ ಸಂಖ್ಯೆಯ ಜನರು ನೆರೆದಿದ್ದರು. ಹಣದುಬ್ಬ ರ ಹಾಗೂ ಇರಾನ್ ಕರೆನ್ಸಿ ರಿಯಾಲ್ ನ ಮೌಲ್ಯ ದ ಕುಸಿತದ ಬಳಿಕ ಇರಾನ್ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು . ಆನಂತರ ಅದು ಆಡಳಿತ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು . ಟೆಹರಾನ್ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಯಲ್ಲಿ ಈವರೆಗೆ ಕನಿಷ್ಠ 2,500 ಮಂದಿ ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ.

- Advertisement -

Related news

error: Content is protected !!