Monday, June 8, 2026
spot_imgspot_img
spot_imgspot_img

ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಇರಂದೂರು, ಇರಂದೂರು ಪ್ರತಿಷ್ಠಾ ಅಷ್ಟಬಂಧ ​​ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ನಡೆಯುವ ಕಾರ್ಯಕ್ರಮದ ವಿವರ ಹೀಗಿವೆ

- Advertisement -
- Advertisement -

ಇರಂದೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ: 07.05.2025ನೇ ಬುಧವಾರದಿಂದ 11.05.2025ನೇ ಆದಿತ್ಯವಾರದವರೆಗೆ ನಡೆಯಲಿದೆ.

ಇಂದು ಪ್ರಾತಃ 6.30 ರಿಂದ ಮಹಾಗಣಪತಿ ಹೋಮ, ನಾಂದಿ ಪುಣ್ಯಾಹ ವಾಚನ, ಅಲ್ಪ ಪ್ರಸಾದ ಶುದ್ದಿ, ಪ್ರಸಾದ ಪ್ರತಿಷ್ಠೆ ರತ್ನ ನ್ಯಾಸಾದಿ ಪೀಠ ಪ್ರತಿಷ್ಠೆ, ಅಂಕುರ ಪೂಜೆ, ವಿಷ್ಣು ಸಹಸ್ರನಾಮ ಯಾಗ ನಂತರ.ಬೆಳಗ್ಗೆ 8:33 ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಮತ್ತು ಸಪರಿವಾರ ಮಹಾಗಣಪತಿ, ವನದುರ್ಗಾ ದೇವರ ಪ್ರತಿಷ್ಟೆ, ಅಷ್ಟಬಂಧ ​​ಕ್ರಿಯೆ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಮುಂದಿನ ಕ್ಷೇತ್ರಾನುಷ್ಠಾನ ನಿಯಮ ನಿಶ್ಚಯಿಸಿ ಎಲ್ಲರೂ ಸೇರಿ ಪ್ರಾರ್ಥಿಸುವುದು, ಮಹಾ ಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಯಂಕಾಲ 6.00 ರಿಂದ ಅಂಕುರ ಪೂಜೆ, ದುರ್ಗಾಪೂಜೆ, ಅಶ್ಲೇಷಾ ಬಲಿ, ನಿಶೀಥ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಸಮಾರಂಭ ನಡೆಯಲಿದೆ.

ಇಂದು ಸಂಜೆ 6:30 ರಿಂದ ನಡೆಯುವ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಮರ್ ಎಡನೀರು ಮಠ, ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತಸಂಸ್ಥಾನಂ ಒಡಿಯೂರು, ಪರಮಪೂಜ್ಯ ಶ್ರೀ ಯೋಗಿ ಕೌಸ್ತುಭಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಲಿರುವರು.

ಇಂದು ರಾತ್ರಿ 9:00 ರಿಂದ ನವಚೇತನ ಗೆಳೆಯರ ಬಳಗ ಮತ್ತು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ.), ಇರಂದೂರು ಇವರ ಪ್ರಾಯೋಜಕತ್ವದಲ್ಲಿ ಪಿಂಗಾರ ಕಲಾವಿದೆ‌ರ್ ಬೆದ್ರ ಅಭಿನಯಿಸಿರುವ ‘ಕದಂಬ’ ಎಂಬ ನಾಟಕ ನಡೆಯಲಿದೆ.

- Advertisement -

Related news

error: Content is protected !!