Saturday, May 4, 2024
spot_imgspot_img
spot_imgspot_img

ಜೆರುಸಲೇಮ್ ನ ಅಲ್-ಅಕ್ಸಾ ಮಸೀದಿ ಆವರಣಕ್ಕೆ ನುಗ್ಗಿದ ಇಸ್ರೇಲ್ ಸೈನಿಕರು: 9 ಮಂದಿ ಫೆಲೆಸ್ತೀನೀಯರಿಗೆ ಗಾಯ

- Advertisement -G L Acharya panikkar
- Advertisement -

ಜೆರುಸಲೇಮ್: ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೇಮ್ನಲ್ಲಿರುವ ಅಲ್-ಅಕ್ಸಾ ಮಸೀದಿ ಆವರಣಕ್ಕೆ ಶುಕ್ರವಾರ ಇಸ್ರೇಲ್ ಸೈನಿಕರು ನುಗ್ಗಿದ್ದು, ಕನಿಷ್ಠ 9 ಫೆಲೆಸ್ತೀನೀಯರು ಗಾಯಗೊಂಡಿದ್ದಾರೆ.

ಇಸ್ರೇಲ್ ನ ತೀವ್ರವಾದಿ ಸಂಘಟನೆಯೊಂದರ ಸದಸ್ಯರು ಮಂಗಳವಾರ ಅಲ್-ಅಕ್ಸಾ ಮಸೀದಿ ಆವರಣದ ಪಕ್ಕ ಮೆರವಣಿಗೆಯಲ್ಲಿ ಹೋಗುವಾಗ ಪ್ರವಾದಿ ಮುಹಮ್ಮದ್ ವಿರುದ್ಧ ನಿಂದನಾತ್ಮಕ ಭಾಷೆಯಲ್ಲಿ ಘೋಷಣೆಗಳನ್ನು ಕೂಗಿದ್ದರೆನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ಶುಕ್ರವಾರದ ಪ್ರಾರ್ಥನೆಯ ಬಳಿಕ ಫೆಲೆಸ್ತೀನೀಯರು ಪ್ರವಾದಿ ಮುಹಮ್ಮದರ ಪರವಾಗಿ ಮೆರವಣಿಗೆಯೊಂದನ್ನು ಆರಂಭಿಸಿದರು.

ಪ್ರಾರ್ಥನೆಯ ಬಳಿಕ ಫೆಲೆಸ್ತೀನೀಯರು ಮಸೀದಿಯ ಎದುರು ಭಾಗದಲ್ಲಿ ಜಮಾಯಿಸಿದರು. ಅಲ್-ಅಕ್ಸಾ ಮಸೀದಿಯಿಂದ ಹಳೆ ನಗರದ ಡಮಾಸ್ಕಸ್ ಗೇಟ್ ವರೆಗೆ ಮೆರವಣಿಗೆಯಲ್ಲಿ ಸಾಗಲು ಅವರು ಉದ್ದೇಶಿಸಿದ್ದರು. ಆದರೆ, ಇಸ್ರೇಲಿ ಪೊಲೀಸರು ಮಸೀದಿ ಆವರಣಕ್ಕೆ ನುಗ್ಗಿ ಪ್ರತಿಭಟನಕಾರರನ್ನು ಚದುರಿಸಿದರು ಎನ್ನಲಾಗಿದೆ.

ಪೊಲೀಸರು ರಬ್ಬರ್ ಲೇಪಿತ ಉಕ್ಕಿನ ಗುಂಡುಗಳು, ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್ ಗಳನ್ನು ಬಳಸಿ ಸಾವಿರಾರು ಸಂಖ್ಯೆಯ ಪ್ರತಿಭಟನಕಾರರನ್ನು ಚದುರಿಸಿದರು.

- Advertisement -

Related news

error: Content is protected !!