Friday, May 3, 2024
spot_imgspot_img
spot_imgspot_img

ಆಸ್ಕರ್ ರೇಸ್’ನಲ್ಲಿ ದಕ್ಷಿಣ ಭಾರತದ ಎರಡು ಸಿನೆಮಾಗಳು..! ಜೈ ಭೀಮ್, ಮರಕ್ಕರ್ ಶಾರ್ಟ್’ಲಿಸ್ಟ್’ಗೆ ಆಯ್ಕೆ

- Advertisement -G L Acharya panikkar
- Advertisement -
suvarna gold

ಭಾರತ ಸಿನೆಮಾ ರಂಗದಲ್ಲಿ ತನ್ನದೇ ಆದ ಭಾಷ್ಯ ಬರೆದ ಎರಡು ಸಿನೆಮಾಗಳು ಆಸ್ಕರ್ ರೇಸ್’ಗೆ ಇಳಿದಿದೆ. ಜೈ ಭೀಮ್ ಹಾಗೂ ಮರಕ್ಕರ್ ಸಿನೆಮಾ ಆಸ್ಕರ್ ಬೆಸ್ಟ್ ಫೀಚರ್ ಫಿಲಂ ವಿಭಾಗಕ್ಕೆ ಶಾರ್ಟ್ಲಿಸ್ಟ್’ಗೆ ಆಯ್ಕೆ ಆಗಿದೆ.

ಟಿಜೆ ಜ್ಞಾನವೇಲ್ ನಿರ್ದೇಶದನ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಜೈ ಭೀಮ್ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಅಮೆಜಾನ್ ಪ್ರೈಮ್’ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾವು ದೇಶಮಟ್ಟದಲ್ಲಿ ವ್ಯಾಪಕ ಚರ್ಚೆಯನ್ನೂ ಹುಟ್ಟು ಹಾಕಿತ್ತು.

ಬುಡಕಟ್ಟು ಜನಾಂಗದವರ ಮೇಲೆ ನಡೆಯುವ ದೌರ್ಜನ್ಯದ ನೈಜ ಘಟನೆಗಳನ್ನು ಆಧರಿಸಿ ಜೈ ಭೀಮ್ ಸಿನಿಮಾದ ಕತೆಯನ್ನು ಹೆಣೆಯಲಾಗಿತ್ತು. ಇದು 2021ನೇ ಸಾಲಿನ ತಮಿಳಿನ ಬೆಸ್ಟ್ ಸಿನಿಮಾ ಎಂದು ಕರೆಯಬಹುದಾಗಿದೆ. ಈ ಸಿನಿಮಾದಲ್ಲಿ ಲಿಜೊಮೋಲ್ ಜೋಸ್ ಹಾಗೂ ಮಣಿಕಂದನ್ ಮುಖ್ಯಭೂಮಿಕೆಯನ್ನು ಹಂಚಿಕೊ0ಡಿದ್ದರು.

ಜೈ ಭೀಮ್ ಜೊತೆಯಲ್ಲಿ ಮೋಹನ್‌ಲಾಲ್’ರ ಮರಕ್ಕರ್ ಕೂಡ ಶಾರ್ಟ್’ಲಿಸ್ಟ್ ಆಗಿದೆ. ಅಂತಿಮ ನಾಮಿನೇಷನ್ ಫೆಬ್ರವರಿ 8ರಂದು ಘೋಷಣೆಯಾಗಲಿದೆ. 94ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಯ್ಕೆಯಾದ ಏಕೈಕ ತಮಿಳು ಸಿನಿಮಾ ಜೈ ಭೀಮ್ ಆಗಿದೆ. ವಿಶ್ವಾದ್ಯಂತ ಆಯ್ಕೆಯಾಗಿರುವ 276 ಚಲನಚಿತ್ರಗಳ ಪೈಕಿ ಜೈ ಭೀಮ್ ಹಾಗೂ ಮಲಯಾಳಂ ಸಿನಿಮಾ ಮರಕ್ಕರ್ ಭಾರತೀಯ ಸಿನಿಮಾಗಳಾಗಿವೆ.

vtv vitla
- Advertisement -

Related news

error: Content is protected !!