Monday, May 6, 2024
spot_imgspot_img
spot_imgspot_img

ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ವಿಶ್ವ ಪರಿಸರ ಅಂಗವಾಗಿ ವಿವಿಧ ಕಾರ್ಯಕ್ರಮ

- Advertisement -G L Acharya panikkar
- Advertisement -

ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ರವರ ಆದೇಶದ ಮೇರೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಐ ಕೇರ್ ಬ್ರಿಗೇಡ್ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಕೆರೆ ಸಂರಕ್ಷಕ, ಪರಿಸರವಾದಿ ಆನಂದ್ ಮಲ್ಲಿಗವಾಡರವರ ಮಾರ್ಗದರ್ಶನದಲ್ಲಿ ಮತ್ತು ಆರ್ ಚಂದ್ರಪ್ಪರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂಗಳೂರು ಜಿಲ್ಲಾ ಅಧ್ಯಕ್ಷ ಜೆ. ಶ್ರೀನಿವಾಸ ರವರ ಸಾರಥ್ಯದಲ್ಲಿ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಗಲಹಟ್ಟಿ ಕೆರೆ ಅಭಿವೃದ್ಧಿ ಮಾಡುವ ಸಲುವಾಗಿ ಕೆರೆಯನ್ನು ದತ್ತು ಪಡೆದರು.

ಜಯ ಕರ್ನಾಟಕ ಜನಪರ ವೇದಿಕೆಯು ಮನೆಗೊಂದು ಮರ ಊರಿಗೊಂದು ಕೆರೆ, ಎಂಬ ಶೀರ್ಷಿಕೆಗೆಯಡಿ ನಮ್ಮ ನಡೆ ನಿಸರ್ಗದ ಕಡೆ ಎನ್ನುತ್ತಾ ಕೆರೆಯನ್ನು ದತ್ತು ಪಡೆದು ಕೆರೆಯ ಸುತ್ತಲು ಸುಮಾರು 2500 ಗಿಡಗಳನ್ನು ಹಾಕಲು ನಿರ್ಧರಿಸಿ ಅದರಲ್ಲಿ ಇಂದು 300 ಗಿಡಗಳನ್ನು ನೆಡಲಾಯಿತು.


ಇದೇ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕೊರೋನ ವಾರಿಯರ್ಸ್ ಆದ ಪಂಚಾಯ್ತಿ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೂ ಸಹ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಮತಾ, ಕಾರ್ಯದರ್ಶಿ ಗೋಪಾಲ, ಯಲಹಂಕ ತಾಲೂಕು ಪಂಚಾಯತಿ ಉಪಾಧ್ಯಕ್ಷೆ ಸುಜಾತ ಶ್ರೀನಿವಾಸ , ಅಂತಮಾಲಜಿಸ್ಟ್ ಲಿಮ್ಕ ರೆಕಾರ್ಡ್ ಪಡೆದಿರುವ ಯತಾರ್ತ್ ಮೂರ್ತಿ, ಐ ಕೇರ್ ಬ್ರಿಗೇಡ್ ಸಂಸ್ಥೆಯ ಪ್ರಸಾದ್, ಪೂರ್ಣಿಮ, ಸ್ಪೂರ್ತಿ, ಶಿಲ್ಪ ಜಯಕರ್ನಾಟಕ ಜನಪರ ವೇದಿಕೆಯ ಮಹಾ ಪ್ರಧಾನ ಸಂಚಾಲಕ ಶೇ ಬೋ ರಾಧಾ ಕೃಷ್ಣ, ಉಪಾಧ್ಯಕ್ಷ ಉದಯಶೆಟ್ಟಿ, ಆತ್ಮಾನಂದ ಸಂಘಟನಾ ಕಾರ್ಯದರ್ಶಿ ಬಾಲಚಂದ್ರ ಪಿಳ್ಳೈ, ಯೋಗೇಶ್ ಬಾಬು, ಮಾಜಿ ಅಧ್ಯಕ್ಷ ಹೆಚ್. ಬಿ. ಹರೀಶ್ ಕುಮಾರ್ ರವರು ಮತ್ತು ಕೋಡಗಲಹಟ್ಟಿ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

- Advertisement -

Related news

error: Content is protected !!