Thursday, March 28, 2024
spot_imgspot_img
spot_imgspot_img

ಕಡೇಶಿವಾಲಯದ ಕ್ರೀಡಾ ರತ್ನ “ಜಯಲಕ್ಷ್ಮಿ”.

- Advertisement -G L Acharya panikkar
- Advertisement -

ಹೆಣ್ಣು ದೃಢತೆಯ ಪ್ರತಿರೂಪ.ಆಕೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಲ್ಲ. ಆಕೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಹಲವಾರು ಮಹಿಳಾ ಸಾಧಕಿಯರು ನಮ್ಮೆದುರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇದಕ್ಕೆ ಅನುರೂಪದಂತೆ ದೃಢ ಮನಸ್ಸಿನ ಮತ್ತು ಉತ್ಸಾಹ ತುಂಬಿದ ಹುಡುಗಿ ಜಯಲಕ್ಷ್ಮಿ. ಈಕೆಯ ಕಠಿಣೆ ಪರಿಶ್ರಮಕ್ಕೆ ದೊರೆತದ್ದು “ಕ್ರೀಡಾ ರತ್ನ ಪ್ರಶಸ್ತಿ” ಎಂಬ ಗರಿ.ಪೆರ್ಲಾಪು ಗಾಣದಕೊಟ್ಟಿಗೆ ನಿವಾಸಿಯಾದ ಜಯಲಕ್ಷ್ಮಿ ಯ ಸಾಧನೆ ಮತ್ತು ತಂದ ಪ್ರಶಸ್ತಿ ಬಿರುದಿಗೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತಿದೆ.

ಬಾಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ , ರಾಜ್ಯ -ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ, ಇದೀಗ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿ ಕಾಲೇಜಿನ ಹಾಗೂ ಊರ ಘನತೆಯನ್ನು ಹೆಚ್ಚಿಸಿದವಳು ನಮ್ಮೂರ ಹುಡುಗಿ ಕುಮಾರಿ ಜಯಲಕ್ಷ್ಮಿ ನಮ್ಮೂರಿನ ಹೆಮ್ಮೆ .

ತನ್ನ ಬಾಲ್ಯ ಶಿಕ್ಷಣವನ್ನು ಕಡೇಶಿವಾಲಯದ ಸರಕಾರಿ ಪ್ರೌಢ ಶಾಲೆಯಲ್ಲಿ ಪೂರೈಸಿ, ಅಥ್ಲೆಟಿಕ್ಸ್ -ಬಾಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಅಲ್ಲಿನ ದೈಹಿಕ ಶಿಕ್ಷಕರ ತರಬೇತಿ ಪಡೆದುಕೊಂಡು ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮವಾಗಿ ಸ್ಪರ್ಧಿಸಿ, ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ಇಲ್ಲಿಂದ ಮುಂದೆ ಜಯಲಕ್ಷ್ಮಿಯ ಸಾಧನೆಯ ಪರ್ವ ಪ್ರಾರಂಭವಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕೆಂಬ ದೃಢ ನಿರ್ಧಾರದಿಂದ ಆಳ್ವಾಸ್ ಕಾಲೇಜು ಮೂಡುಬಿದ್ರೆಯಲ್ಲಿ ಸ್ಪೋರ್ಟ್ಸ್ ಖೋಟಾದಡಿ ದಾಖಲಾತಿ ಪಡೆದು ತರಬೇತುದಾರರಾದ ಪ್ರವೀಣ್ ಕುಮಾರ್ ಕೆ. ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವರ ಗರಡಿಯಲ್ಲಿ ಪಳಗಿ, ಸೀನಿಯರ್ ನಾಷನಲ್ಸ್ ವಿಭಾಗದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ, ಸತತವಾಗಿ 5 ವರ್ಷ ಪ್ರಥಮ ಸ್ಥಾನವನ್ನು ಹಾಗೂ ಒಂದು ಬಾರಿ ದ್ವಿತೀಯ ಸ್ಥಾನವನ್ನು ಪಡೆದರು.

ಇವರ ಕ್ರೀಡಾಸಕ್ತಿ, ಆಟವನ್ನು ಗುರುತಿಸಿ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಕೊಡಲ್ಪಡುವ ‘ಸ್ಟಾರ್ ಆಫ್ ಇಂಡಿಯಾ ‘ಎಂಬ ಬಿರುದನ್ನು ಮೂರು ಬಾರಿ ಮುಡಿಗೇರಿಸಿಕೊಂಡರು…ರಾಷ್ಟ್ರ ಮಟ್ಟದ ‘ಫೆಡರೇಷನ್ ಕಪ್ ‘ ಸತತವಾಗಿ ಮೂರು ಬಾರಿ ಗೆದ್ದು ಕಾಲೇಜಿನ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.

ಅದಲ್ಲದೆ ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಬಾಲ್ ಬ್ಯಾಡ್ಮಿಂಟನ್ ತಂಡದ ನಾಯಕಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕ್ರೀಡೆಯಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿದ ಈಕೆ ನಮ್ಮೂರಿನ ಹೆಮ್ಮೆ. ಇವರ ಈ ಕ್ರೀಡಾಸಕ್ತಿಗೆ ಸಂದ ಫಲ ಎಂಬಂತೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯು ಈ ಬಾರಿ ಇವರ ಪಾಲಾಗಿದೆ.

ಶುಭಾಶಯ ಕೋರಿದ ಯುವಶಕ್ತಿ ಕಡೇಶಿವಾಲಯ(ರಿ)

“ಹೆಸರಿಗೆ ತಕ್ಕಂತೆ ಜಯದ ಹಾದಿಯಲ್ಲಿ ಜಯಲಕ್ಷ್ಮಿ..ನಮ್ಮ ಊರಿನ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ನಮ್ಮೂರ ಹೆಮ್ಮೆಯ ಕುವರಿ.ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ತನ್ನ ಕ್ರೀಡಾಸಕ್ತಿಗೆ ಗೆಲುವಿನ ರೆಕ್ಕೆ ಕಟ್ಟಿ ಇದೀಗ ಬಾನೆತ್ತೆರದಲ್ಲಿ ಹಾರುತ್ತಿರುವ ನಮ್ಮೂರಿನ ಕೀರ್ತಿಕಲಶ ಈ ಸಹೋದರಿ.ಮನೆಯಲ್ಲಿ ಅದೆಷ್ಟು ಕಷ್ಟಗಳಿದ್ದರೂ ತನ್ನ ತಾಯಿ ಹಾಗೂ ಇಬ್ಬರು ಅಣ್ಣಂದಿರ ಪ್ರೋತ್ಸಾಹ ಆಶೀರ್ವಾದದಿಂದ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪ್ರತಿಮ‌ ಸಾಧಕಿ.ಇಡೀ ಸಮಾಜ ತನ್ನನ್ನು ತನ್ನ ಮನೆಯವರನ್ನು ಗುರುತಿಸುವಂತೆ ಮಾಡಿದ ಸಹೋದರಿ ಜಯಲಕ್ಷ್ಮೀ ರಾಜ್ಯಸರ್ಕಾರದ ಈ ಬಾರಿಯ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಎಲ್ಲರಿಗೂ ಅತೀವ ಸಂತೋಷವನ್ನುಂಟುಮಾಡಿದೆ‌.ನಿಮ್ಮ ಸಾಧನೆಯ ಹಾದಿ ಇನ್ನಷ್ಟು ವಿಸ್ತಾರವಾಗಲಿ. ಪ್ರಶಸ್ತಿಗಳ ಬೇಟೆ ನಿರಂತರವಾಗಿರಲಿ. ಸಕಲ ದೈವ ದೇವರ ಆಶೀರ್ವಾದ ನಿಮಗಿರಲಿ”ಎಂದು ಶುಭಾಶಯ ಕೋರಿದ್ದಾರೆ.

- Advertisement -

Related news

error: Content is protected !!