Sunday, July 19, 2026
spot_imgspot_img
spot_imgspot_img

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಪುತ್ತೂರು ತಾಲೂಕು ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಮತ್ತು ಪ್ರಜ್ವಲ್ ಕೋಟ್ಯಾನ್

- Advertisement -
- Advertisement -

ಕೋಶಾಧಿಕಾರಿಯಾಗಿ ಅಶ್ವಿನಿ ಪೆರುವಾಯಿ, ಜತೆ ಕಾರ್ಯದರ್ಶಿಯಾಗಿ ಸುಮನ ಆಯ್ಕೆ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಹಾಸಭೆ ದರ್ಬೆಯಲ್ಲಿರುವ ಪ್ರಶಾಂತ್‌ ಮಹಲ್‌ ಸಭಾಂಗಣದಲ್ಲಿ ಡಿ.9ರಂದು ನಡೆಯಿತು.

ಜಿಲ್ಲಾಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯ ವೇದಿಕೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಹರೀಶ್‌ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಜೆ. ಪಿಂಟೊ, ಪುತ್ತೂರು ತಾಲೂಕು ಅಧ್ಯಕ್ಷ ರಾಮ್‌ದಾಸ್ ಶೆಟ್ಟಿ ವಿಟ್ಲ‌ ಮತ್ತು ಸುಳ್ಯ ತಾಲೂಕು ಅಧ್ಯಕ್ಷ ಯಶ್ವಿತ್‌ ಕಾಳಮನೆ ಉಪಸ್ಥಿತರಿದ್ದರು.

ಸಭೆಯಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮ್‌ದಾಸ್‌ ಶೆಟ್ಟಿ ಅವರು ತಾಲೂಕು ಉಪಾಧ್ಯಕ್ಷರನ್ನಾಗಿ ನ್ಯೂಸ್ ಅಕ್ಕರೆಯ ಸಂಸ್ಥಾಪಕ ಜಯಪ್ರಕಾಶ್‌ ಕೆ. ಬದಿನಾರು ಹಾಗೂ ಪ್ರಜ್ವಲ್‌ ಕೋಟ್ಯಾನ್ (ಕಹಳೆ ನ್ಯೂಸ್), ಜತೆ ಕಾರ್ಯದರ್ಶಿಯಾಗಿ ಸುಮನಾ ಕೇಪು (ಕಹಳೆ ನ್ಯೂಸ್) ಮತ್ತು ಕೋಶಾಧಿಕಾರಿಯಾಗಿ ಅಶ್ವಿನಿ ಪೆರುವಾಯಿ (ವಿಟಿವಿ ನ್ಯೂಸ್ )ಅವರನ್ನು ನೇಮಕ ಮಾಡಿದರು.

ದ.ಕ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷ ಈಶ್ವರ್ ವಾರಣಾಶಿ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!