Wednesday, June 26, 2024
spot_imgspot_img
spot_imgspot_img

(ಜೂ.15) ವಿಟ್ಲ ಜೇಸಿ ಶಾಲೆ: ರೋಬೋಟಿಕ್ ಲ್ಯಾಬ್ ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ: ಸ್ಟೆಮ್ ರೋಬೋ ಸಂಸ್ಥೆಯ ಸಹಯೋಗದೊಂದಿಗೆ ನಡೆಯುವ ಜೇಸಿ ರೋಬೋಟಿಕ್ ಲ್ಯಾಬ್ ಉದ್ಘಾಟನಾ ಸಮಾರಂಭವು ಜೂ.15 ಶನಿವಾರ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯಲಿದೆ.

ಆಧುನಿಕ ಜಗತ್ತಿಗೆ ಪೂರಕವಾಗುವ ಮಾಹಿತಿ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳನ್ನು ಉನ್ನತೀಕರಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ ತಂತ್ರಜ್ಞಾನಗಳ ಬಳಕೆ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಆಸಕ್ತರಾಗುವಂತೆ ಮಾಡುತ್ತಿದೆ.

ಈ ನೆಲೆಯಲ್ಲಿ ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಯೊಂದು ಈ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿರುವುದು ಪ್ರಥಮ. ಸುಮಾರು 1200 ವಿದ್ಯಾರ್ಥಿಗಳಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಸೌಲಭ್ಯವನ್ನು ಸಂಸ್ಥೆಯ ಆಡಳಿತ ಮಂಡಳಿಯು ಮಾಡಿಕೊಡುತ್ತಿದೆ. ಸ್ಟೆಮ್ ರೋಬೋ ಸಂಸ್ಥೆಯ ಸಹಯೋಗದೊಂದಿಗೆ ನಡೆಯುವ ಜೇಸಿ ರೋಬೋಟಿಕ್ ಲ್ಯಾಬ್ ನ ಉದ್ಘಾಟನಾ ಸಮಾರಂಭವನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಮೋಹನ್ ಆಳ್ವ ರವರು ನಡೆಸಿ ಕೊಡಲಿದ್ದಾರೆ. ಜೊತೆಗೆ ಸಂಸ್ಥೆಯ ಅಧ್ಯಕ್ಷ ಎಲ್.ಎನ್. ಕೂಡೂರು ಹಾಗೂ ಸ್ಟೆಮ್ ರೋಬೋದ ಮ್ಯಾನೇಜರ್ ಸರ್ವೇಶ್ ನಾಯಕ್ ರವರು ಉಪಸ್ಥಿತರಿರುವರು. ವಿದ್ಯಾಭಿಮಾನಿಗಳನ್ನು ,ಪೋಷಕರನ್ನು, ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಈ ಮೂಲಕ ಆಮಂತ್ರಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!